
Ashwaveega News 24×7 ಸೆ. 03: ಭೀಮಾತೀರದಲ್ಲಿ ಮತ್ತೆ ನೆತ್ತರೋಕುಳಿ ಹರಿದಿದೆ. ವಿಜಯಪುರದ ಚಡಚಣದ ದೇವರನಿಂಬರಗಿಯಲ್ಲಿ ಹಾಡಹಗಲೇ ರೌಡಿಶೀಟರ್ನ ಗುಂಡಿಕ್ಕಿ ಭೀಕರ ಹತ್ಯೆ ಮಾಡಲಾಗಿದೆ. 45 ವರ್ಷದ ಭೀಮನಗೌಡ ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಭೀಮನಗೌಡ ಬಿರಾದಾರ್ ಮೇಲೆ 3 ಸುತ್ತು ಫೈರಿಂಗ್ ನಡೆಸಿದ್ರು.. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಭೀಮನಗೌಡ ಸಾವನ್ನಪ್ಪಿದ್ದಾರೆ.
ಹೇರ್ ಕಟಿಂಗ್ ವೇಳೆ ದಾಳಿ ಮಾಡಿದ್ದ ದುರುಳರು ಕಣ್ಣಿಗೆ ಖಾರದ ಪುಡಿ ಎರಚಿ ಭೀಮನಗೌಡ ಮೇಲೆ ಫೈರಿಂಗ್ ಮಾಡಿದ್ದಾರೆ. ರೌಡಿಶೀಟರ್ನ ತಲೆ, ಎದೆಗೆ ಗುಂಡುಗಳು ತಗುಲಿದ್ದು, ಸ್ಥಳದಲ್ಲೆಲ್ಲಾ ರಕ್ತದ ಓಕಳಿಯೇ ಹರಿದಿದೆ. ಇನ್ನು, ರೌಡಿಶೀಟರ್ ಭೀಮನಗೌಡ ಗ್ರಾ.ಪಂ. ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಹಿಸದ ಕಾರಣ ದುರುಳರು ಹತ್ಯೆಗೈದ್ರಾ ಎಂಬ ಅನುಮಾನ ಮೂಡಿ ಬರ್ತಿದೆ. ಯಾಕಂದ್ರೆ ಭೀಮನಗೌಡ ಮೊನ್ನೆಯಷ್ಟೇ ತನ್ನ ಆಪ್ತನಿಗೆ ಗ್ರಾ.ಪಂ. ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದ.. ಅದ್ರೆ ಮುಂದಿನ ಚುನಾವಣೆಗೂ ಭರ್ಜರಿ ತಯಾರಿ ನೆಡೆಸುತ್ತಿದ್ದ.
ಅಷ್ಟಕ್ಕೂ ಊರಿನವರಿಗೆಲ್ಲಾ ಅಚ್ಚುಮೆಚ್ಚಿನವಾಗಿ ಬೆಳೆದಿದ್ದ. ಹೀಗಾಗಿ ರೌಡಿಶೀಟರ್ ಭೀಮನ ಹೆಳಿಗೆ ಸಹಿಸದೇ ಗ್ರಾ.ಪಂ.ಸದಸ್ಯ ಇಸ್ಮಾಯಿಲ್ ಮನಿಯಾರ್ ಅಂಡ್ ಗ್ಯಾಂಗ್ ಹತ್ಯೆ ಮಾಡಿದ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.