
Ashwaveega News 24×7 ಅಕ್ಟೋಬರ್. 10: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಬಿಎ ಮೊದಲ ಸಭೆ ನಡೀತು. ಈ ಸಭೆಗೆ ಬಿಜೆಪಿ ಶಾಸಕರ, ಸಂಸದರು ಗೈರಾಗಿದ್ರು. 75 ಜಿಬಿಎ ಸದಸ್ಯರ ಪೈಕಿ ಸಭೆಗೆ ಹಾಜರಾಗಿದ್ದು ಕೇವಲ 35 ಜನ ಮಾತ್ರ. ಕಾಂಗ್ರೆಸ್ನ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಪ್ರಿಯಾ ಕೃಷ್ಣ ಕೂಡ ಸಭೆಗೆ ಗೈರಾಗಿದ್ರು.
ಆದ್ರೂ ಸಿಎಂ, ಡಿಸಿಎಂ ಸಭೆಯನ್ನು ನಡೆಸಿದ್ರು. ಮೊದಲ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಅನುದಾನ ನೀಡುವಂತೆ ಬೇಡಿಕೆ ಇಟ್ರು. ಅಲ್ಲದೇ, ಪಾಲಿಕೆಗಳಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿ ಮಾಡುವಂತೆ ಆಗ್ರಹಿಸಿದ್ರು. ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯ್ತು.
ಬಿಡಿಎಗೆ ಇದ್ದ ನಕ್ಷೆ ಮಂಜೂರಾತಿ ಇನ್ಮುಂದೆ ಜಿಬಿಎ ವ್ಯಾಪ್ತಿಗೆ ಬರಲಿದೆ. ಟಿಡಿಆರ್ ನೀಡುವ ಅಧಿಕಾರನೂ ಇನ್ಮುಂದೆ ಜಿಬಿಎ ವ್ಯಾಪ್ತಿಗೆ ತರಲಾಗಿದೆ. ಐದು ಪಾಲಿಕೆಗಳ ಬಜೆಟ್ ತೀರ್ಮಾನ ಮಾಡಲಾಗಿದೆ. ಬೆಸ್ಕಾಂ, ಬಿಎಂಟಿಸಿ, ಅಗ್ನಿ ಶಾಮಕ ದಳ ಇನ್ಮುಂದೆ ಜಿಬಿಎ ವ್ಯಾಪ್ತಿಗೆ ಬರಲಿದೆ.
ಅಲ್ಲದೇ, ಜಿಬಿಎ ಸಭೆಯ ವಿರುದ್ಧವಾಗಿ ಬಿಜೆಪಿ ನಾಯಕರು ಮಲ್ಲೇಶ್ವರ್ ಬಿಜೆಪಿ ಕಚೇರಿ ಪ್ರತ್ಯೇಕ ಸಭೆ ನಡೆಸಿದ್ರು. ಆದ್ರೆ, ಎಸ್.ಟಿ.ಸೋಮಶೇಖರ್ ಜಿಬಿಎ ಸಭೆಗೆ ಹಾಜರಾಗಿದ್ರು. ಜಿಬಿಎ ರಚನೆಗೆ ವಿಪಕ್ಷನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ರು. ಬೆಂಗಳೂರು 5 ಭಾಗ ಮಾಡಿ ಕಾಂಗ್ರೆಸ್ ಅವರು ಹೊಡೆದಿದ್ದಾರೆ.
ನಾವು ಅಧಿಕಾರಕ್ಕೆ ಬಂದ್ರೆ, ಕೆಂಪೇಗೌಡರ ಆಶಯದಂತೆ ಬೆಂಗಳೂರು ಇರಲಿದೆ ಅಂದಿದ್ದಾರೆ.