ನಾಳೆ ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಂಡಿದ್ದು ಈ ಬಗ್ಗೆ ದೆಹಲಿಯಲ್ಲಿ ಶಾಸಕ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ . ಕಾಂಗ್ರೆಸ್ನವರು ಸಮಾವೇಶ ಮಾಡ್ಲಿ, ನಾವು ತಲೆ ಕೆಡಿಸಿಕೊಳ್ಳಲ್ಲ . 2028ಕ್ಕೆ ನಾವು ತಕ್ಕ ಉತ್ತರ ಕೊಡುತ್ತೇವೆ.
50 ವರ್ಷದಿಂದ ಹಾಸನಕ್ಕೆ ಕಾಂಗ್ರೆಸ್ ಏನೂ ಮಾಡಿಲ್ಲ. 2018ರಲ್ಲಿ ಏನಾಯ್ತು, ಕೊನೆಗೆ ದೇವೇಗೌಡರ ಬಳಿ ಬರಬೇಕಾಯ್ತು. 2028ಕ್ಕೆ ಮತ್ತೆ ನಾವೇಲ್ಲ ಅಧಿಕಾರಕ್ಕೆ ಬರುತ್ತೇವೆ. ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ H.D.ರೇವಣ್ಣ ವಾಗ್ದಾಳಿ ನಡೆಸಿದ್ರು.