
Ashwaveega News 24×7 ಸೆ. 13: ನಾನು ನಿಮ್ಮೊಂದಿಗಿದ್ದೇನೆ. ಭಾರತ ಸರ್ಕಾರವು ಮಣಿಪುರದ ಜನರೊಂದಿಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಭರವಸೆಯ ಮಾತುಗಳನ್ನಾಡಿದ್ದಾರೆ.
ಚುರಾಚಂದಾಪುರದ ಶಾಂತಿ ಮೈದಾನದಲ್ಲಿ ಮೈತೇಯಿ ಹಾಗೂ ಕುಕಿ ಸಂತ್ರಸ್ಥರನ್ನು ಭೇಟಿಯಾಗಿ ಸಂವಾದ ನಡೆಸಿದರು. ಈ ವೇಳೆ ರಾಜ್ಯದಲ್ಲಿ ಶಾಂತಿ ಪುನಃಸ್ಥಾಪಿಸಲು ಕೇಂದ್ರದ ಬದ್ಧತೆಯ ಭರವಸೆಯನ್ನು ನೀಡಿದರು.
ನಾನು ನಿಮ್ಮೊಂದಿಗಿದ್ದೇನೆ. ಭಾರತ ಸರ್ಕಾರವು ಮಣಿಪುರದ ಜನರೊಂದಿಗಿದೆ ಎಂದು ನಾನು ಇಂದು ಭರವಸೆ ನೀಡುತ್ತೇನೆ. ಮಣಿಪುರವು ನಮ್ಮ ಭರವಸೆಯ ಭೂಮಿ ಎಂದು ಮೋದಿ ಬಣ್ಣಿಸಿದರು.
ಈ ಪ್ರದೇಶವನ್ನು ಆವರಿಸಿದ್ದ ಹಿಂಸಾಚಾರದ ನಂತರ ರಾಜ್ಯವು ಚೇತರಿಸಿಕೊಳ್ಳುತ್ತಿದೆ. ಸಂತ್ರಸ್ತರೊಂದಿಗೆ ಮಾತನಾಡಿ ಮಣಿಪುರದಲ್ಲಿ ಭರವಸೆ ಮತ್ತು ವಿಶ್ವಾಸದ ಹೊಸ ಉದಯ ಹೊರಹೊಮ್ಮುತ್ತಿದೆ ಎಂದು ನಾನು ಹೇಳಬಲ್ಲೆ ಎಂದರು.
ಯಾವುದೇ ಪ್ರದೇಶದ ಅಭಿವೃದ್ಧಿಗೆ ಶಾಂತಿಯನ್ನು ಸ್ಥಾಪಿಸುವುದು ನಿರ್ಣಾಯಕವಾಗಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ, ಈಶಾನ್ಯದಲ್ಲಿ ದೀರ್ಘಕಾಲದಿಂದ ಇದ್ದ ಅನೇಕ ವಿವಾದಗಳು ಮತ್ತು ಸಂಘರ್ಷಗಳು ಕೊನೆಗೊಂಡಿವೆ. ಜನರು ಶಾಂತಿಯ ಹಾದಿಯನ್ನು ಆರಿಸಿಕೊಂಡಿದ್ದಾರೆ. ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.