Ashwaveega News 24×7 ಫೆಬ್ರವರಿ 15 -2026 : ಭಾರತ–ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಟಿ – 20 ಸಮರಕ್ಕೆ ವೇದಿಕೆ ಸಜ್ಜಾಗಿದೆ. ಶ್ರೀಲಂಕಾದ ಕೊಲಂಬೊ ಕ್ರೀಡಾಂಗಣದತ್ತ ಇಡೀ ಕ್ರಿಕೆಟ್ ಲೋಕದ ಚಿತ್ತ ನೆಟ್ಟಿದೆ. ಬಹಿಷ್ಕಾರದ ಹೈಡ್ರಾಮಾ ಬಳಿಕ ಮತ್ತೆ ಮುಖಾಮುಖಿಯಾಗುತ್ತಿರುವ ಬದ್ಧವೈರಿಗಳ ಕದನ ಕ್ರಿಕೆಟ್ ಅಭಿಮಾನಿಗಳಲ್ಲಿ ರೋಮಾಂಚನ ಹುಟ್ಟಿಸಿದೆ.
ಸೂಪರ್ 8 ಸುತ್ತಿಗೆ ಪ್ರವೇಶಿಸುವ ಕನಸಿಗಾಗಿ ಎರಡೂ ತಂಡಗಳು ಪ್ರಾಣಪಣವಾಗಿ ಹೋರಾಡಲು ಸಜ್ಜಾಗಿವೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ಆತ್ಮವಿಶ್ವಾಸದಿಂದ ಮೈದಾನಕ್ಕಿಳಿಯಲಿದೆ.
ಟೀಂ ಇಂಡಿಯಾ ನಾಯಕ Suryakumar Yadavಗೆ ಪಾಕಿಸ್ತಾನದ ಯುವ ಆಟಗಾರ Salman Agha ಸವಾಲ್ ಹಾಕಿದ್ದಾರೆ. “ಮೈದಾನದಲ್ಲೇ ಉತ್ತರ ಕೊಡುತ್ತೇವೆ” ಎಂಬ ಸಂದೇಶದೊಂದಿಗೆ ಪಾಕ್ ಪಡೆ ಸಜ್ಜಾಗಿದೆ.
ಸ್ಫೋಟಕ ಬ್ಯಾಟರ್ Abhishek Sharma ಕಣಕ್ಕಿಳಿಯುವ ಸಾಧ್ಯತೆ ಇದೆ. ಮಧ್ಯಕ್ರಮದಲ್ಲಿ Sanju Samson ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ. ಆಲ್ರೌಂಡರ್ಗಳಾದ Hardik Pandya ಹಾಗೂ Axar Patelರ ಆಟ ಫಲಿತಾಂಶ ನಿರ್ಧರಿಸಬಹುದು.
ಭಾರತದ ಗೆಲುವಿಗಾಗಿ ದೇಶದಾದ್ಯಂತ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಂಗ್ ಟೀಂ ಇಂಡಿಯಾ ಗೆಲುವಿಗೆ ಶುಭ ಹಾರೈಕೆಗಳ ಮಹಾಪೂರ ಹರಿದುಬರುತ್ತಿದೆ.
ಕೊಲಂಬೊದಲ್ಲಿ ಮಳೆಯ ಭೀತಿ ಕಾಡುತ್ತಿದ್ದು, ಪಂದ್ಯಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಆದರೂ ಹೈವೋಲ್ಟೇಜ್ ಮ್ಯಾಚ್ ಗೆದ್ದುಬೀಗಲು ಭಾರತ ರೆಡಿಯಾಗಿದೆ.
ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿರುವ ಭಾರತ–ಪಾಕಿಸ್ತಾನ ಸಮರ ಮತ್ತೊಮ್ಮೆ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.
