ಮಂಡ್ಯ : ಸಿಎಂ ವಿರುದ್ಧದ ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತಕ್ಕೆ ಇಡಿ ವರದಿ ನೀಡಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಇ.ಡಿ ಗೆ ತನಿಖೆ ಮಾಡಲು ಅಧಿಕಾರವೇ ಇಲ್ಲ. ಇದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು. ಇಡಿ ಬಂದಿರೋದು ರಾಜಕೀಯ ಪ್ರೇರಿತವಾಗಿದೆ.
ನಾಳೆ ನ್ಯಾಯಾಲಯದಲ್ಲಿ ಕೇಸ್ ಬರ್ತಾ ಇದೆ. ಸಿಂಗಲ್ ಜಡ್ಜ್ ಬೆಂಚ್ನಲ್ಲಿ ಬರುತ್ತೆ. ಇ.ಡಿಗೆ ಯಾವುದೇ ಅಧಿಕಾರವೂ ಇಲ್ಲ. ಕೋರ್ಟ್ ಮೇಲೆ ಒತ್ತಡ ಹಾಕಲು ಹೀಗೆ ಮಾಡಿದ್ದಾರೆ. ಲೋಕಾಯುಕ್ತ ತನಿಖೆ ಮಾಡ್ತಾ ಇದ್ದಾರೆ. ತನಿಖೆ ಮಾಡಿ ವರದಿ ನೀಡ್ತಾರೆ. ಲೋಕಾಯುಕ್ತ ಮೇಲೆ ಒತ್ತಡ ಹಾಕಲು ಮಾಡ್ತಾ ಇದ್ದಾರೆ. ಇದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶ ಎಂದು ಮಂಡ್ಯದಲ್ಲಿ ಅಸಮಾಧಾನ ಹೊರಹಾಕಿದ್ರು