ಕಲಬುರಗಿ : ಮುಸ್ಲಿಂರ ಮತದಾನ ಹಕ್ಕು ಕಸಿದುಕೊಳ್ಳಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ಬಗ್ಗೆ ಬಿಜೆಪಿಯವರು ತುಟಿ ಬಿಚ್ಚುತ್ತಿಲ್ಲ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಖರ್ಗೆ, ಮಿಸ್ಟರ್ ಅಶೋಕ್ ಪ್ರಕಾರ ಸ್ವಾಮೀಜಿಗಳು ಕಾನೂನು ಬಾಹಿರವಾಗಿ ಹೇಳಿಕೆ ಕೊಟ್ಟರೂ ಏನು ಮಾಡಬಾರದ?..
ನೀವುಗಳು ತಪ್ಪು ಮಾಡಿ ಜೈ ಶ್ರೀರಾಮ್ ಎಂದ ತಕ್ಷಣ ನಿಮ್ಮ ತಪ್ಪು ಸರಿಹೋಗುತ್ತಾ..? ಪೇಜಾವರ ಶ್ರೀ ಹೇಳಿಕೆ ಬಗ್ಗೆ ಬಿಜೆಪಿ ಮೌನವಾಗಿದೆಯೆಂದರೆ ಮನುಸ್ಮೃತಿ ಸಮರ್ಥನೆ ಅಂತಾನೆ ಅರ್ಥ ಅಂತಾ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.