ನಾವೆಲ್ಲರೂ ನಮ್ಮ ಮನೆಗಳನ್ನು ಸುಂದರವಾದ ಪೀಠೋಪಕರಣಗಳಿಂದ ಅಲಂಕರಿಸುವುದನ್ನು ಇಷ್ಟಪಡುತ್ತೇವೆ. ಅದಕ್ಕಾಗಿಯೇ ಅನೇಕ ವಸ್ತುಗಳನ್ನ ಸಹ ನಾವು ತಂದು ಇಟ್ಟುಕೊಳ್ಳುತ್ತೇವೆ. ಹೂವಿನ ಕುಂಡ, ಟೇಬಲ್, ಫೋಟೋ, ಪೇಂಟಿಂಗ್ ಹೀಗೆ ವಿಭಿನ್ನವಾದ ವಸ್ತುಗಳನ್ನ ತಂದು ನಾವು ಮನೆಯ ಅಲಂಕಾರ ಮಾಡುತ್ತೇವೆ. ಈ ವಸ್ತುಗಳು ನಮ್ಮ ಮನೆಯ ಅಂದವನ್ನ ಹೆಚ್ಚಿಸುತ್ತದೆ. ಈ ರೀತಿಯ ವಸ್ತುಗಳಲ್ಲಿ ನವಿಲು ಗರಿ ಸಹ ಒಂದು. ಹಾಗಾಗಿಯೇ ಅನೇಕ ಜನರು ನವಿಲು ಗರಿಯನ್ನ ಅಥವಾ ಅದರಿಂದ ಮಾಡಿದ ಸಣ್ಣ ಕೈ ಫ್ಯಾನ್ಗಳನ್ನ ಇಟ್ಟುಕೊಂಡಿರುತ್ತದೆ. ಇದು ಮನೆಗೆ ಒಂಥರ ಲುಕ್ ಕೊಡುತ್ತದೆ ಅಲ್ವಾ ….
ನವಿಲು ಗರಿಯು ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲ ಜ್ಯೋತಿಷ್ಯದ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಮನೆಯಲ್ಲಿ ವಾಸ್ತು ದೋಷ ಹೋಗಲಾಡಿಸಲು ಕೂಡ ಮನೆಗಳಲ್ಲಿ ಈ ನವಿಲು ಗರಿಗಳನ್ನು ಇಟ್ಟುಕೊಳ್ಳುತ್ತಾರೆ . ಆದರೆ ನವಿಲು ಗರಿಗಳನ್ನು ಮನೆಯ ಕೆಲವು ಭಾಗಗಳಲ್ಲಿ ಇಡಬಾರದು ಹಾಗೂ ಇನ್ನೂ ಕೆಲವು ಸ್ಥಳಗಳಲ್ಲಿ ಇಡಬೇಕು ಎಂದು ಹೇಳಲಾಗಿದೆ. ಅನೇಕ ಜನರು ಅರ್ಥವನ್ನು ತಿಳಿಯದೆ ಗೋಡೆಯ ಮೇಲೆ ನೇತುಹಾಕುತ್ತಾರೆ ಅಥವಾ ಇನ್ಯಾವುದೋ ಜಾಗದಲ್ಲಿ ತಪ್ಪಾಗಿ ಇಡುತ್ತಾರೆ. ಆದರೆ ನವಿಲು ಗರಿಗಳನ್ನ ಇಡಲು ವಾಸ್ತು ಪ್ರಕಾರ ಸರಿಯಾದ ಜಾಗವಿದೆ. ಆಗ ಮಾತ್ರ ನಾವು ಅವುಗಳಿಂದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಹಾಗಾದ್ರೆ ಮನೆಯಲ್ಲಿ ನವಿಲು ಗರಿಯನ್ನ ಇಟ್ಟುಕೊಂಡರೆ ಏನೆಲ್ಲಾ ಪ್ರಯೋಜನ ಸಿಗುತ್ತೆ ಹಾಗೂ ಯಾವ ದಿಕ್ಕಿನಲ್ಲಿ ಇವುಗಳನ್ನ ಇಡಬೇಕು ಎಂಬುದು ಇಲ್ಲಿ ತಿಳಿಯೋಣ ಬನ್ನಿ
ಪ್ರತಿಯೊಬ್ಬರಿಗೂ ಸಂಪತ್ತು ಪಡೆಯಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಾಗಾಗಿ ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಕೆಲವರು ಅದೆಷ್ಟೇ ಹಣವನ್ನ ಗಳಿಸಿದರೂ ಸಹ ಅದನ್ನ ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ ಅದಕ್ಕೆ ಸಹ ಈ ನವಿಲು ಗರಿ ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯ ದೇವ ಮತ್ತು ಇಂದ್ರ ದೇವ ಪೂರ್ವ ದಿಕ್ಕಿನ ಅಧಿಪತಿಗಳು. ಹಾಗಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ನವಿಲು ಗರಿಯನ್ನು ಇಡುವುದು ವಿಶೇಷವಾಗಿ ಅದೃಷ್ಟವನ್ನ ನೀಡುತ್ತದೆ. ನೀವು ಅದನ್ನು ವಾಯುವ್ಯಕ್ಕೆ ಮುಖ ಮಾಡಿ ಸಹ ಇಡಬಹುದು. ನವಿಲಿನ ಗರಿಗಳನ್ನು ಈ ದಿಕ್ಕಿನಲ್ಲಿ ಇಡುವುದರಿಂದ ನೀವು ಹೆಚ್ಚಿನ ಸಂಪತ್ತನ್ನು ಪಡೆಯಬಹುದು. ಅದರಂತೆ, ನವಿಲು ಗರಿ ಗರಿ ಶ್ರೀ ಕೃಷ್ಣನಿಗೆ ಪ್ರಿಯವಾದ ವಸ್ತುವಾಗಿದೆ. ಆದ್ದರಿಂದ ಮನೆಯ ಕೆಲವು ಸ್ಥಳಗಳಲ್ಲಿ ನವಿಲು ಗರಿಗಳನ್ನು ಇಟ್ಟುಕೊಂಡರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮನೆಯಲ್ಲಿರುವ ವಾಸ್ತು ದೋಷಗಳು ನಿವಾರಣೆಯಾಗಿ ಕುಟುಂಬಕ್ಕೆ ಸುಖ, ಸಮೃದ್ಧಿ, ಸಂಪತ್ತು ಬರಲಿದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ನಿಮ್ಮ ಮನೆಯ ಮುಂದಿನ ಬಾಗಿಲು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರದಿದ್ದರೆ ಆ ಮನೆಯ ಬಾಗಿಲಿನ ಮೇಲೆ ಒಂದು ಗಣೇಶನ ವಿಗ್ರಹ ಸ್ಥಾಪಿಸಿ ಅದರ ಮೇಲೆ ಮೂರು ನವಿಲು ಗರಿಗಳನ್ನು ಇರಿಸಿದರೆ ಅದೃಷ್ಟ ನಿಮ್ಮದಾಗುತ್ತೆ ಹಾಗೂ ವಾಸ್ತ ದೋಷ ಪರಿಹಾರವಾಗುತ್ತೆ ಎಂದು ಹೇಳಲಾಗುತ್ತೆ . ಮನೆಯ ಪೂಜಾ ಕೋಣೆಯಲ್ಲಿ ಎರಡು ನವಿಲು ಗರಿಗಳನ್ನು ಒಟ್ಟಿಗೆ ಇಡುವುದರಿಂದ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಸುತ್ತವೆ. ಮಾತ್ರವಲ್ಲ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳಿದ್ದರೆ ಅವುಗಳಿಂದ ಮುಕ್ತಿ ಪಡೆಯಬಹುದಾಗಿದೆ .
11 ಕ್ಕಿಂತ ಹೆಚ್ಚು ನವಿಲು ಗರಿಗಳನ್ನು ಮನೆಯ ಡ್ರಾಯಿಂಗ್ ರೂಮ್ ಅಥವಾ ಊಟದ ಕೋಣೆಯಲ್ಲಿ ಒಟ್ಟಿಗೆ ಇಡುವುದರಿಂದ ಕುಟುಂಬ ಸದಸ್ಯರ ನಡುವೆ ಪರಸ್ಪರ ಸಾಮರಸ್ಯವನ್ನು ಸುಧಾರಿಸುತ್ತದೆ ಮತ್ತು ವಾತ್ಸಲ್ಯವನ್ನು ಕಾಪಾಡಿಕೊಳ್ಳುತ್ತದೆ ಎಂದು ನಂಬಲಾಗಿದೆ. ಹಣದ ಸಮಸ್ಯೆ ನಿವಾರಣೆಗೆ ಶುಕ್ಲ ಪಕ್ಷದ ಸಮಯದಲ್ಲಿ ಆಗ್ನೇಯ ಮೂಲೆಯಲ್ಲಿ ಕನಿಷ್ಠ 5 ಅಡಿ ಎತ್ತರದಲ್ಲಿ ಎರಡು ನವಿಲು ಗರಿಗಳನ್ನು ಇಟ್ಟರೆ ಹಣದ ಸಮಸ್ಯೆಗಳು ಪರಿಹಾರವಾಗುತ್ತವೆ. ಮನೆಯ ಸ್ವಚ್ಛ ಮತ್ತು ಉತ್ತಮ ಪರಿಸರ ಒದಗಿಸಲು ನವಿಲು ಗರಿ ಕೂಡ ಸಹಕಾರಿಯಾಗಿರುತ್ತೆ ….