
Ashwaveega News 24×7 ಸೆ. 01:ನಿರ್ದೇಶಕ ಪ್ರಶಾಂತ್ ನೀಲ್ ‘ಡ್ರ್ಯಾಗನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ನಟ ಜ್ಯೂ. ಎನ್ಟಿಆರ್ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬಹಳ ಹಿಂದೆ ಘೋಷಣೆಯಾಗಿದ್ದ ಸಿನಿಮಾ ಕೊಂಚ ತಡವಾಗಿ ಸೆಟ್ಟೇರಿತ್ತು. ‘ವಾರ್2’ ಬಳಿಕ ತಾರಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಎಸ್ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಅಧಿಕೃತವಾಗಿ ಸಿನಿಮಾ ಟೈಟಲ್ ಫಿಕ್ಸ್ ಆಗಿಲ್ಲ. NTR31 ಹೆಸರಿನಲ್ಲಿ ಸದ್ಯಕ್ಕೆ ಸಿನಿಮಾ ಕೆಲಸಗಳು ನಡೀತಿದೆ. ಚಿತ್ರತಂಡ ‘ಡ್ರ್ಯಾಗನ್’ ಎಂಬ ಖಡಕ್ ಟೈಟಲ್ ಪರಿಶೀಲನೆಯಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಇದನ್ನು ಮೆಚ್ಚಿಕೊಂಡಿದ್ದಾರೆ. ಕರ್ನಾಟಕ ಹಾಗೂ ಹೈದರಾಬಾದ್ ಸೇರಿ ಹಲವು ಭಾಗಗಳಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಮುಂದಿನ ವರ್ಷ ಜೂನ್ 26ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ.
ಹೌದು ‘ಡ್ರ್ಯಾಗನ್’ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಈ ಹಿಂದೆ ರಶ್ಮಿಕಾ ಮಂದಣ್ಣ, ಊರ್ವಶಿ ರೌಟೇಲ, ರುಕ್ಮಿಣಿ ವಸಂತ್ ಸೇರಿದಂತೆ ಹಲವು ನಟಿಯರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿತ್ತು. ಆದರೆ ಯಾವುದು ಫೈನಲ್ ಆಗಿಲ್ಲ. ಖುದ್ದು ರುಕ್ಮಿಣಿ ವಸಂತ್ ಎದುರು ಈ ಪ್ರಶ್ನೆ ಇಟ್ಟಾಗಲೂ ನಯವಾಗಿ ನುಣುಚಿಕೊಂಡಿದ್ದರು ಅಂದು.
ಎಸ್ಖ್ಯಾತ ನಿರ್ಮಾಪಕರೇ ಇದೀಗ ಡ್ರ್ಯಾಗನ್ ಸಿನಿಮಾ ನಾಯಕಿ ಯಾರು ಎಂದು ಹೇಳಿಬಿಟ್ಟಿದ್ದಾರೆ. ರುಕ್ಮಿಣಿ ವಸಂತ್ ನಟನೆಯ ತಮಿಳಿನ ‘ಮದರಾಸಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ತೆಲುಗು ಪ್ರೀ ರಿಲೀಸ್ ಈವೆಂಟ್ ಇತ್ತೀಚೆಗೆ ನಡೀತು. ಕಾರ್ಯಕ್ರಮದಲ್ಲಿ ನಿರ್ಮಾಪಕ ಎನ್. ವಿ ಪ್ರಸಾದ್ ಮಾತನಾಡಿ ‘ಡ್ರ್ಯಾಗನ್’ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ ಎಂದು ಹೇಳಿದ್ದಾರೆ.
ಇನ್ನು ಈಗಾಗಲೇ ತಮಿಳು ತೆಲುಗು ಚಿತ್ರರಂಗದಲ್ಲಿ ರುಕ್ಮಿಣಿ ವಸಂತ್ ಕ್ರೇಜ್ ಶುರುವಾಗಿದೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಿಷಬ್ ಶೆಟ್ಟಿ ನಟನೆಯ ‘ಕಾಂತಾರ-1’ ಚಿತ್ರದಲ್ಲಿ ಕನಕವತಿಯಾಗಿ ರುಕ್ಕು ಬಣ್ಣ ಹಚ್ಚಿದ್ದಾರೆ. ಇನ್ನು ಯಶ್ ಜೊತೆ ‘ಟಾಕ್ಸಿಕ್’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ. ಇದೆಲ್ಲದರ ನಡುವೆ ಪ್ರಶಾಂತ್ ನೀಲ್ ಹಾಗೂ ಎನ್ಟಿಆರ್ ಜೋಡಿಯ ಡ್ರ್ಯಾಗನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.
ಎಸ್ತೆಲುಗು ನಿರ್ಮಾಪಕ ಎನ್. ವಿ ಪ್ರಸಾದ್ ಮಾತನಾಡಿ ರುಕ್ಮಿಣಿ ಕ್ರೇಜ್ ಜೋರಾಗಿದೆ ಎಂದಿದ್ದಾರೆ. “ಕಾಂತಾರ-1 ಚಿತ್ರದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ, ಜ್ಯೂ. ಎನ್ಟಿಆರ್ ಚಿತ್ರಕ್ಕೂ ಆಕೆ ನಾಯಕಿ, ‘ಟಾಕ್ಸಿಕ್’ ಚಿತ್ರದಲ್ಲಿ ಕೂಡ ರುಕ್ಮಿಣಿ ನಟಿಸುತ್ತಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ. ಒಟ್ಟಾರೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಕನ್ನಡ ನಟಿ ಬಣ್ಣ ಹಚ್ಚುತ್ತಿದ್ದಾರೆ. ‘ಡ್ರ್ಯಾಗನ್’ ಚಿತ್ರದಲ್ಲಿ ಆಕೆ ನಟಿಸುವ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗುವ ಸಾಧ್ಯತೆಯಿದೆ. ಹೌದು ‘ಕೆಜಿಎಫ್’ ಸರಣಿ ಬಳಿಕ ತೆಲುಗಿನ ‘ಸಲಾರ್’ ಸಿನಿಮಾ ಕಟ್ಟಿಕೊಟ್ಟು ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಸೀಕ್ವೆಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದೆ. ಅದಕ್ಕೂ ಮುನ್ನ ‘ಡ್ರ್ಯಾಗನ್’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇದು ನೀಲ್ ಸ್ಟೈಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಬಹಳ ದೊಡ್ಡಮಟ್ಟದಲ್ಲಿ ಮೇಕಿಂಗ್, ಮಾರ್ಕೆಟಿಂಗ್, ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ಕೂಡ ಮಾಡಲಾಗ್ತಿದೆ.