
Big update from 'Kantara – 1'
(ಅಶ್ವವೇಗ) Ashwaveega News 24×7 ಜು.07: ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ಈ ಸಂಭ್ರಮದ ಮಧ್ಯೆ ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ.
ನಟ ರಿಷಬ್ ಶೆಟ್ಟಿ ಹುಟ್ಟು ಹಬ್ಬದ ನಿಮಿತ್ತ ಹೊಂಬಾಳೆ ಸಂಸ್ಥೆ ಕಾಂತಾರ ಚಾಪ್ಟರ್ 1 ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ರಿಲೀಸ್ ಆಗಿರೋ ಪೋಸ್ಟರ್ನಲ್ಲಿ ಕಲರಿಯಪಟ್ಟು ಲುಕ್ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಮೂಲಗಳ ಪ್ರಕಾರ, ಕಾಂತಾರ ಟೀಸರ್ ರಿಲೀಸ್ ಡೇಟ್ ಇಂದು ರಿವೀಲ್ ಆಗಲಿದೆಯಂತೆ.. ಸದ್ಯಕ್ಕೆ ಕುಂದಾಪುರದಲ್ಲೇ ರಿಷಬ್ ಶೆಟ್ಟಿ ಬೀಡು ಬಿಟ್ಟಿದ್ದು, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.