
Ashwaveega News 24×7 ಅಕ್ಟೋಬರ್. 11: ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ಬೈದಿರುವ ಕಾರಣಕ್ಕೆ ಕೇರಳ ಚಿತ್ರರಂಗದ ನಟ ಜಯಕೃಷ್ಣನ್ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಅವರೊಂದಿಗೆ ಇದ್ದ ಸಂತೋಷ್ ಅಬ್ರಾಹಂನನ್ನೂ ಬಂಧಿಸಿದ್ದು, ಇನ್ನೋರ್ವ ಆರೋಪಿ ವಿಮಲ್ ನಾಪತ್ತೆಯಾಗಿದ್ದಾರೆ. ಕಳೆದ ಅ.9 ರಂದು ಈ ಮೂವರು ಆ್ಯಪ್ ಮೂಲಕ ಮಂಗಳೂರಿನ ಬಿಜೈಗೆ ಕ್ಯಾಬ್ ಬುಕ್ ಮಾಡಿದ್ದರು.
ಅಹ್ಮದ್ ಶಫೀಕ್ ಎಂಬವರು ಕರೆ ಮಾಡಿ ವಿಚಾರಿಸಿದ್ದರು. ಈ ವೇಳೆ ಹಿಂದಿ, ಮಲಯಾಳಂ ಭಾಷೆಯಲ್ಲಿ ಮಾತನಾಡಿದ ಆರೋಪಿಗಳು, ನೀನು ಮುಸ್ಲಿಂ ತೀವ್ರವಾದಿ, ಟೆರರಿಸ್ಟ್ ಎಂದು ಅವಾಚ್ಯವಾಗಿ ಬೈದಿದ್ದಾರೆ ಎಂದು ಈ ಬಗ್ಗೆ ಕ್ಯಾಬ್ ಚಾಲಕ ಅಹ್ಮದ್ ಶಫೀಕ್, ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀರು ಇಬ್ಬರನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಬಿಎನ್ಎಸ್ 352, 353(2) ಅಡಿ ಪ್ರಕರಣ ದಾಖಲಾಗಿದೆ.