
Ashwaveega News 24×7 ಸೆ. 02::ಕಿಚ್ಚ ಸುದೀಪ್ 52 ನೇ ಜನ್ಮ ದಿನ ಸ್ಪೆಷಲ್ ಆಗಿಯೇ ಸೆಲೆಬ್ರೇಟ್ ಆಗಿದೆ. ಅವರು ‘ತಾಯವ್ವ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ಹಲವು ಹಿಟ್ ಚಿತ್ರ ನೀಡಿದ್ದಾರೆ. ಇನ್ನು ಅಭಿಮಾನಿಗಳು ತೋರುವ ಪ್ರೀತಿಯನ್ನ ಅಷ್ಟೆ ಹೆಮ್ಮೆಯಿಂದಲೇ ಕಿಚ್ಚ ಇಲ್ಲಿ ಹೇಳಿಕೊಂಡಿದ್ದಾರೆ.
ಅವರಿಗಾಗಿಯೇ ಎರಡು ಲೈನ್ ಹಾಡು ಕೂಡ ಹಾಡಿದ್ದಾರೆ. ಒಂದು ರಿಕ್ವೆಸ್ಟ್ ಕೂಡ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾರೇ ಏನೇ ಅಂದ್ರೂ ಅಷ್ಟೆ. ಯಾರೇ ಎಷ್ಟೇ ಕೆಟ್ಟದಾಗಿ ಬರೆದರೂ ಅಷ್ಟೇನೆ. ಯಾರೂ ರಿಯಾಕ್ಟ್ ಮಾಡ್ತಾಬೇಡಿ. ಯಾರೋ ಕಿತ್ತೋದ್ ನನ್ನ ಮಕ್ಕಳ ಬಗ್ಗೆ ಕೇರ್ ಮಾಡ್ಬೇಡಿ. ನಿಮ್ಮನ್ನ ಸಂಪಾದಿಸೋಕೆ ನಾನು 30 ವರ್ಷ ತೆಗೆದುಕೊಂಡಿದ್ದೇನೆ. ನಿಮ್ಮ ಪ್ರೀತಿ ಆಶೀರ್ವಾದ ಹೀಗೆ ಇರಲಿ….ಹೀಗೆ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಸೆ.1ರ ಮಧ್ಯರಾತ್ರಿಯಿಂದಲೇ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ರಾತ್ರಿಯೇ ಸುದೀಪ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಆಗಮಿಸಿದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಇನ್ನು ಸುದೀಪ್ ಬರ್ತ್ಡೇ ಖುಷಿಯನ್ನು ಹೆಚ್ಚಿಸಲು ಒಂದು ದಿನ ಮೊದಲೇ ಹೊಸ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಕಿಚ್ಚ ಸುದೀಪ್ ಅಭಿನಯದ 47ನೇ ಸಿನಿಮಾ ಇದಾಗಿದ್ದು, ಟೈಟಲ್ ಏನು ಎಂಬುದನ್ನು ಈ ಟೀಸರ್ ಮೂಲಕ ತಿಳಿಸಲಾಗಿದೆ. ಇಷ್ಟು ದಿನ ಈ ಸಿನಿಮಾವನ್ನು ತಾತ್ಕಾಲಿಕವಾಗಿ ‘K 47’ ಎಂದು ಕರೆಯಲಾಗುತ್ತಿತ್ತು. ಈ ಚಿತ್ರದ ಶೀರ್ಷಿಕೆ ‘ಮಾರ್ಕ್’ ಎಂಬುದು ಈಗ ಬಹಿರಂಗ ಆಗಿದೆ.