
ಐಪಿಎಲ್ 2025ರ ಕಾವು ಏರುತ್ತಿದೆ. ಮಾರ್ಚ್ 22ರಂದು ಕೆಕೆಆರ್ Vs ಆರ್ಸಿಬಿ ಪಂದ್ಯ ನಡೆಯಲಿದ್ದು ಟೂರ್ನಿ ಆರಂಭಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೂ ಮುನ್ನ ಆರ್ಸಿಬಿ ಅನ್ ಬಾಕ್ಸ್ ಇವೆಂಟ್ ಅಯೋಜನೆ ಮಾಡಿದ್ದು. ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.ನಂತ ನಡೆದ ಆರ್ಸಿಬಿ ಅನ್ ಬಾಕ್ಸ್ ಇವೆಂಟ್ನಲ್ಲಿ ಒಬ್ಬ ಒಬ್ಬ ಆಟಗಾರರ ಹೆಸರು ಕರೆದು ವೇದಿಕೆಗೆ ಆಹ್ವಾನಿಸಲಾಯಿತ್ತು. ವೇದಿಕೆಯಲ್ಲಿ ವಿರಾಟ್ ಕೊಹ್ಲಿ ವೇದಿಕೆ ಬಳಿ ಬರುತ್ತಿರುವಾಗಲೇ ಅಭಿಮಾನಿಗಳ ಧ್ವನಿ ಇನ್ನೂ ಜೋರಾಯಿತ್ತು. ನಂತರ ಅಭಿಮಾನಿಗಳ ಬೆಂಬಲದ ಬಗ್ಗೆ ಮಾತನಾಡಿದ ಕೊಹ್ಲಿ ಕನ್ನಡದಲ್ಲೇ ಬೊಂಬಾಟ್ ಎಂದು ಹೇಳಿ ಮಾತನಾಡಿದರು. ರಜತ್ ಪಾಟೀದಾರ್ ಅವರು ತಂಡವನು ಬಹುಕಾಲದವರೆಗೆ ಮುನ್ನಡೆಸುತ್ತಾರೆ. ಅವರಲ್ಲಿ ಅಪಾರ ಪ್ರತಿಭೆಯಿದೆ. ಜೊತೆಗೆ ತಂಡಕ್ಕೆ ಅಮೋಘವಾದ ಯಶಸ್ಸು ತಂದುಕೊಡುವರು ಎಂದು ಶುಭ ಹಾರೈಸಿ ರಜತ್ ಅವರಿಗೆ ಆರ್ಸಿಬಿಯ ಸ್ಮರಣ ಫಲಕವನ್ನು ನೀಡಿದರು. ನಾನು ಹದಿನೆಂಟು ವರ್ಷದಿಂದ ಈ ತಂಡಕ್ಕಾಗಿ ಆಡುತ್ತಿದ್ದೇನೆ. ಇದು ಅದ್ಬುತವಾದ ಊರು, ಅಭಿಮಾನಿಗಳ ಪ್ರೀತಿ ಅದ್ಬುತ, 2025ರಲ್ಲಿ ನಮ್ಮ ತಂಡ ಉತ್ತಮವಾಗಿದೆ. ಅವರ ಜೊತೆ ಕಣಕ್ಕಿಳಿಯಲು ನಾನು ಕಾತರತೆಯಿಂದ ಎದರು ನೋಡುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದರು.
ಕನ್ನಡದಲ್ಲೇ ಮಾತನಾಡಿದ ರಜತ್
ನಮಸ್ಕಾರ. ಎಲ್ಲರೂ ಹೇಗಿದ್ದೀರಾ ಎನ್ನುವ ಮೂಲಕ ಆರ್ಸಿಬಿಯ ನೂತನ ನಾಯಕ ರಜತ್ ಪಾಟೀದಾರ್ ತಮ್ಮ ಮಾತನ್ನು ಶುರು ಮಾಡಿದರು. ವಿಶ್ವದ ಅತಿ ದೊಡ್ಡ ಫ್ಯಾನ್ಸ್ ಹೊಂದಿರುವ ಆರ್ಸಿಬಿ ತಂಡಕ್ಕೆ ನಾಯಕನ್ನಾಗಿರುವುದು ಅತಿ ಸಂತೋಷವಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಪ್ರೀತಿ ತೋರುತ್ತಿರುವ ಅಭಿಮಾನಿಗಳಿಗೆ ಚಿರಋಣಿ. ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್ ಅವರ ಅಟವನ್ನು ನೋಡಿ ಬೆಳೆದವನು. ಇದೀಗ ಆ ತಂಡಕ್ಕೆ ನಾಯಕನ್ನಾಗಿರುವುದು ಖುಷಿ ತಂದಿದೆ ಎಂದು ಆರ್ಸಿಬಿ ನಾಯಕ ರಜತ್ ಪಾಟೀದರ್ ಹೇಳಿದ್ದಾರೆ.

ಬಿಗ್ಸಿಕ್ಸರ್ ಹೊಡೆದ ಶೆಫರ್ಡ್
ಆರ್ಸಿಬಿ ಅನ್ ಬಾಕ್ಸ್ ಇವೆಂಟ್ನಲ್ಲಿ ಆಟಗಾರರೆಲ್ಲರೂ ಅಭ್ಯಾಸ ನಡೆಸಿದರು. ವಿಂಡೀಸ್ ಆಟಗಾರ ರೊಮಾರಿಯೊ ಶೆಫರ್ಡ್ ಕೂಡ ಕಠಿಣ ಅಭ್ಯಾಸ ನಡೆಸಿದರು. ಅವರು ಹೊಡೆದ ಎರಡು ಚೆಂಡು ಮೈದಾನದ ಚಾವಣಿಗೆ ಬಡಿಯಿತು. ವಿರಾಟ್ ಕ್ಯಾಚಿಂಗ್ ಪ್ರಾಕ್ಟೀಸ್ ಮಾಡಿದರು. ಉಳಿದ ಆಟಗಾರರು ಫೀಲ್ಟಿಂಗ್ಗೆ ಒತ್ತು ನೀಡಿದರು. ಇದಾದ ನಂತರ ಆಟಗಾರರೆಲ್ಲರೂ ಮೈದಾನದಲ್ಲಿ ಒಂದು ಸುತ್ತು ಹಾಕಿ ಅಭಿಮಾನಿಗಳನ್ನು ರಂಜಿಸಿದರು. ಈ ವೇಳೆ ಕೆಲ ಆಟಗಾರರು ಅಭಿಮಾನಿಗಳಿಗೆ ಸೆಲ್ಪಿ ನೀಡಿದರು.
ಅಭಿಷೇಕ್ ಎಸ್