
Ashwaveega News 24×7 ಜು. 31: ಸದ್ಯ ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾ ವಾರ್ಗೆ ಇದೀಗ ನಟ ಲೂಸ್ ಮಾದ ಯೋಗೇಶ್ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಮಾತನ್ನಾಡಿರುವ ನಟ ಯೋಗಿ ‘ಹೆಣ್ಣು ಮಕ್ಕಳಿಗೆ ಅಶ್ಲೀಲ ಸಂದೇಶ ಕಳಿಸೋರನ್ನು ಕರೆದುಕೊಂಡು ಬಂದು ಚಪ್ಪಲಿಯಲ್ಲಿ ಹೊಡಿಬೇಕು’ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಕೆಟ್ಟ ಸಂದೇಶ ಕಳಿಸೋರ ಬಗ್ಗೆ ನಟ ಯೋಗಿ ಕೋಪಗೊಂಡಿದ್ದಾರೆ.
ಈ ಬಗ್ಗೆ ಹೇಳಿರುವ ನಟ ಯೋಗಿ ‘ಅವರಿಗೆ ಜ್ಞಾನನೇ ಇಲ್ಲ..ಸ್ಟಾರ್ ವಾರ್ ಎಲ್ಲಾ ಕಡೆ ಕಾಮನ್.. ಆದರೆ ಪರ್ಸನಲ್ ಆಗಿ ಟಾರ್ಗೆಟ್ ಮಾಡಲಾಗ್ತಿದೆ. ರಮ್ಯಾ ಅವರು ಕಂಪ್ಲೀಟ್ ಕೊಟ್ಟಿದ್ದು ಒಳ್ಳೆಯದು. ದರ್ಶನ್ ಅವರು ಮುಂದೆ ಬಂದು ಫ್ಯಾನ್ಸ್ ಗೆ ಹೀಗೆ ಮಾಡ್ಬೇಡಿ ಅಂದ್ರೆ ಒಳ್ಳೆಯದು.
ಇಂಥದ್ದನೆಲ್ಲಾ ನಟ ದರ್ಶನ್ ಅವರು ಹೇಳಿ ಮಾಡಿಸೋ ವ್ಯಕ್ತಿ ಅಲ್ಲ… ಮುಖ ಕಾಣ್ದಿರೋ ಅಕೌಂಟ್ ನಲ್ಲಿ ಈ ಥರ ಬೇವರ್ಸಿ ಕೆಲಸ ಮಾಡೋವರಿಗೆ ಏನ್ ಹೇಳೋದು? ನನಗೂ ಹೀಗೆ ಆಗಿತ್ತು , ಇಂಡಸ್ಟ್ರಿಗೆ ಕಾಲಿಟ್ಟ ಹೊಸದರಲ್ಲಿ. ಯಾರೋ ಒಬ್ರು ನನಗೆ ಬ್ಲೇಡ್ ಹಾಕ್ಬಿಟ್ಟಿದ್ರು..’ ಎಂದು ನಟ ಯೋಗೇಶ್ ಹೇಳಿದ್ದಾರೆ.
ಸದ್ಯ ಟ್ರೆಂಡಿಂಗ್ನಲ್ಲಿರೋ ಸುದ್ದಿ ಅಂದ್ರೆ ಅದು ನಟಿ ರಮ್ಯಾ ಹಾಗೂ ನಟ ದರ್ಶನ್ ಫ್ಯಾನ್ಸ್ ಗಲಾಟೆ. ನಟಿ ರಮ್ಯಾ ಅವರು ‘ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿ, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ‘ಭಾರತದ ಸಾಮಾನ್ಯ ಜನರಿಗೂ ನ್ಯಾಯ ಸಿಗುವ ಆಶಾಕಿರಣ ಮೂಡಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ’ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದರು.
ಅದರಿಂದ ರೊಚ್ಚಿಗೆದ್ದ ನಟ ದರ್ಶನ್ ಫ್ಯಾನ್ಸ್, ‘ಡಿ ಬಾಸ್ ಫ್ಯಾನ್ಸ್’ ಹೆಸರಿನ ಕೆಲವು ಫೇಕ್ ಅಕೌಂಟ್ಗಳಿಂದ ನಟಿ ರಮ್ಯಾಗೆ ಬೈದು ಕೆಟ್ಟ ಅಂದರೆ ಅಶ್ಲೀಲ ಮೆಸೇಜ್ ಮಾಡಿದ್ದರು.
ಇದರಿಂದ ಸಿಟ್ಟಿಗೆದ್ದ ನಟಿ ರಮ್ಯಾ ಅವರು ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ಸಮರ ಸಾರಿದ್ದಾರೆ. ಮೊದಲಿಗೆ ಮಹಿಳಾ ಆಯೋಗಕ್ಕೆ ದೂರು ನೀಡಿರುವ ನಟಿ ರಮ್ಯಾ, ಆ ಬಳಿಕ ಕಮೀಷನರ್ಗೆ ದೂರು ನೀಡಿದ್ದಾರೆ. 43 ದರ್ಶನ್ ಫ್ಯಾನ್ಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಟ ಶಿವರಾಜ್ಕುಮಾರ್ ಸೇರಿದಂತೆ, ದೊಡ್ಮನೆ ಕುಟುಂಬ, ನಟ ಪ್ರಥಮ್ ಹಾಗೂ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ನಟಿ ರಮ್ಯಾ ಪರ ಬ್ಯಾಟ್ ಬೀಸಿದ್ದಾರೆ.