Ashwaveega News 24×7 ಏಪ್ರಿಲ್ 4– 2026 : ಬಾಗಲಕೋಟೆ : ನಗರದಲ್ಲಿ ಎಲ್ಪಿಜಿ ಗ್ಯಾಸ್ ಸಿಗದಿರುವ ಕಾರಣ ಆಟೋ ಚಾಲಕರು ಕಂಗಾಲಾಗಿರುವ ಘಟನೆ ಎದುರಾಗಿದೆ. ಕೆಲವು ಸ್ಟೇಷನ್ಗಳ ಬಳಿ ಆಟೋಗಳ ಕ್ಯೂ ಕಿ.ಮೀ ಗಟ್ಟಲೆ ಸಾಲುಗೊಂಡಿದ್ದು, ರಸ್ತೆಗಳಲ್ಲಿ ನಿಲ್ಲುತ್ತಿರುವ ಆಟೋಗಳು ಸಂಚಾರ ದಟ್ಟಣೆ ಉಂಟು ಮಾಡುತ್ತಿದ್ದವು.
ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಶೇಷಾದ್ರಿಪುರಂನ ಕೃಷ್ಣ ಆಟೋ ಗ್ಯಾಸ್ ಸ್ಟೇಷನ್ ಸೇರಿದಂತೆ ನಗರದಲ್ಲಿ ಕೆಲವು ಗ್ಯಾಸ್ ಸ್ಟೇಷನ್ಗಳಿಗೆ ಪೋಲಿಸ್ ನೋಟಿಸ್ ಜಾರಿ ಮಾಡಲಾಗಿದೆ. ಸಂಚಾರ ದಟ್ಟಣೆ ತಡೆಯಲು, ಬೆಳಗ್ಗೆ 8 ರಿಂದ 11 ಗಂಟೆಯವರೆಗೆ ಸ್ಥಳೀಯ ರಸ್ತೆ ಕೆಲವು ಭಾಗಗಳನ್ನು ಕ್ಲೋಸ್ ಮಾಡಲಾಗುವುದು. ಗ್ಯಾಸ್ ಬಂಕ್ಗಳ ಸಮಯವನ್ನು ಕೂಡ ಸಂಜೆ 5 ರಿಂದ ರಾತ್ರಿ 8 ಗಂಟೆವರೆಗೂ ಕ್ಲೋಸ್ ಮಾಡಲು ಸೂಚಿಸಲಾಗಿದೆ .
ಪೋಲಿಸರು ಎಚ್ಚರಿಸಿದ್ದಾರೆ , ಈ ಅವಧಿಯಲ್ಲಿ ಯಾವುದೇ ಸ್ಟೇಷನ್ ತೆರೆಯಲಾದರೆ ಬಿಎನ್ಎಸ್ 285 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೋಟಿಸ್ ಮೂಲಕ ಆಟೋ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿ, ಸಾರ್ವಜನಿಕರಿಗೆ ಸುಗಮ ಸಂಚಾರವನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ..
