ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಈ ವಾರ ಮಾನಸ ಔಟ್ ಆಗಿದ್ದು, ಬಿಗ್ಬಾಸ್ ಮನೆಯಲ್ಲಿ ಇದಾಗಲೇ ಮೂವರು ಎಲಿಮಿನೇಟ್ ಆಗಿದ್ದಾರೆ.ಎನ್ನಲಾಗಿದೆ. ಮುಂದಿನ ಸ್ಪರ್ಧಿ ಯಾರು ಎಂಬ ಬಗ್ಗೆ ಬಿಗ್ಬಾಸ್ ವೀಕ್ಷಕರಿಗೆ ಕುತೂಹಲ ಹೆಚ್ಚಾಗಿದ್ದು, ಕಿಚ್ಚ’ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಕಳೆದ ವಾರ ನಿಧನರಾದ ಹಿನ್ನೆಲೆಯಲ್ಲಿ ನಟ ಸುದೀಪ್ ಈ ವಾರದ ‘ಬಿಗ್ ಬಾಸ್’ ವೀಕೆಂಡ್ ಸಂಚಿಕೆಗಳಿಗೆ ಗೈರಾಗಿದ್ದಾರೆ. ಹಾಗಾಗಿ ಅತಿಥಿಯಾಗಿ ಶನಿವಾರದ ಸಂಚಿಕೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕಾಣಿಸಿಕೊಂಡಿದ್ದಾರೆ.
ಹೌದು ಈ ವಾರ ಮನೆಯಿಂದ ಒಬ್ಬರನ್ನು ಎಲಿಮಿನೇಟ್ ಮಾಡಬೇಕಾಗಿದ್ದು, ಆ ಕಾರಣಕ್ಕಾಗಿ ‘ಬಿಗ್ ಬಾಸ್’ ಮನೆಯೊಳಗೆ ಸೃಜನ್ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಮನೆಯೊಳಗೆ ಬಂದವರೇ, ಯಾರ್ ಯಾರಿಗೆ ಇಲ್ಲಿ ಸೇಫ್ ಆಗುತ್ತೀನಿ ಅನ್ನೋ ಕಾನ್ಫಿಡೆನ್ಸ್ ಇದೆ ಎಂದು ಪ್ರಶ್ನೆ ಮಾಡಿದ್ದು, ಇದೇ ವೇಳೆ ಮಾನಸ ಕಣ್ಣೀರಿಟ್ಟಿದ್ದಾರೆ. ಇಲ್ಲಿ ಮಾತನಾಡೋದು ನೋಡಿದರೆ ನಾನೇನೂ ಮಾಡಿಲ್ಲವೇನೋ ಎಂದು ಅನ್ನಿಸುತ್ತಿದೆ ಅಂತ ಮಾನಸ ಕಣ್ಣೀರಿಟ್ಟಿದ್ದು, ಇನ್ನು ಈ ವಾರ ಎಲಿಮಿನೇಷನ್ ಅನ್ನು ವಿಭಿನ್ನವಾಗಿ ಮಾಡಲಾಗಿದೆ. ಮನೆಯ ಗಾರ್ಡನ್ ಏರಿಯಾಗೆ ಎರಡು ಕಾರುಗಳು ಬಂದಿವೆ. ಅದರಲ್ಲಿ ಎಲಿಮಿನೇಟ್ ಆಗುವ ಒಬ್ಬರನ್ನು ಕೂರಿಸಿಕೊಂಡು ಕಾರುಗಳು ಮನೆಯಿಂದ ಹೊರಗೆ ಹೋಗಿವೆ. ಅವರು ಯಾರು ಅನ್ನೋದು ಸದ್ಯದ ಪ್ರಶ್ನೆ. ಈ ವಾರ 9 ಮಂದಿ ನಾಮಿನೇಟ್ ಆಗಿದ್ದರು. ಆ 9 ಮಂದಿಯಲ್ಲಿ ಯಾರು ಉಳಿದುಕೊಳ್ಳುತ್ತಾರೆ? ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.