
Meet Sabih Khan, Apple's next COO
(ಅಶ್ವವೇಗ) Ashwaveega News 24×7 ಜು.09: ಪ್ರಮುಖ ಬೆಳವಣಿಗೆಯಲ್ಲಿ ಖ್ಯಾತ ಐಫೋನ್ ತಯಾರಿಕಾ ಸಂಸ್ಥೆ Apple ಸಂಸ್ಥೆಯ ನೂತನ COO ಆಗಿ ಭಾರತ ಮೂಲದ ಸಾಬಿಹ್ ಖಾನ್ (Sabih Khan) ನೇಮಕಗೊಂಡಿದ್ದಾರೆ.
ಮೊಬೈಲ್ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ (COO) ಭಾರತ ಮೂಲಕ ಸಾಬಿಹ್ ಖಾನ್ (58) ಅವರನ್ನು ನೇಮಕ ಮಾಡಿದೆ.
ಕಳೆದ 30 ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಾಬಿಹ್ ಖಾನ್ ಅವರು ಪ್ರಸ್ತುತ ಕಾರ್ಯನಿರ್ವಹಣಾ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಿವೃತ್ತಿಯಾಗಲಿರುವ ಸಿಒಒ ಜೆಫ್ ವಿಲಿಯಮ್ಸ್ ಅವರ ಜಾಗಕ್ಕೆ ಸಾಬಿಹ್ ಖಾನ್ ನೇಮಕಗೊಳ್ಳುತ್ತಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಜೆಫ್ ವಿಲಿಯಮ್ಸ್ ಅವರು 1995 ರಲ್ಲಿ ಆಪಲ್ನ ಖರೀದಿ ಗುಂಪಿಗೆ ಸೇರುವ ಮೊದಲು, ಅವರು GE ಪ್ಲಾಸ್ಟಿಕ್ಸ್ನಲ್ಲಿ ಅಪ್ಲಿಕೇಶನ್ಗಳ ಅಭಿವೃದ್ಧಿ ಎಂಜಿನಿಯರ್ ಮತ್ತು ಪ್ರಮುಖ ಖಾತೆ ತಾಂತ್ರಿಕ ನಾಯಕರಾಗಿ ಕೆಲಸ ಮಾಡಿದ್ದರು.
3 ದಶಕಗಳ ಕಾಲ ಆ್ಯಪಲ್ನಲ್ಲಿ ಸೇವೆ ಸಲ್ಲಿಸಿರುವ ಖಾನ್, 2019ರಲ್ಲಿ ಕಾರ್ಯನಿರ್ವಹಣಾ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಕಳೆದ ಆರು ವರ್ಷಗಳಿಂದ ಖಾನ್ ಅವರು ಆ್ಯಪಲ್ ಉತ್ನನ್ನಗಳ ಜಾಗತಿಕ ಪೂರೈಕೆ ಸರಪಳಿ, ಯೋಜನೆ, ಸಂಗ್ರಹಣೆ, ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಉತ್ಪನ್ನ ಪೂರೈಕೆಯ ಮೇಲ್ವಿಚಾರಣೆ ನಡೆಸುತ್ತಿದ್ದರು.