ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆನ್ಲೈನ್ ಟ್ರೇಡಿಂಗ್ ಮೂಲಕ ಮಹಾ ದೋಖಾ ನಡೆದಿದೆ. ಕೋಟ್ಯಾಂತರ ಹಣವನ್ನು ಡಬ್ಬಲ್ ಮಾಡುವ ಆಸೆಗೆ ಬಿದ್ದು, ವಿದ್ಯಾವಂತರು ತಮ್ಮ 32 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ಮೈಸೂರು ನಗರದಲ್ಲಿ ಕೇವಲ ಆರು ತಿಂಗಳಲ್ಲಿ ಈ ದೊಡ್ಡ ಮಟ್ಟದ ಸೈಬರ್ ವಂಚನೆ ನಡೆದಿದೆ. ಟ್ರೇಡಿಂಗ್ನಲ್ಲಿ ಹಣವನ್ನು ಬೇಗನೆ ಹೆಚ್ಚಿಸಲು ಹಂಬಲಿಸಿದ್ದ ಹಲವರು, ಸೈಬರ್ ವಂಚಕರ ಹೊಣೆಗೇರಿದ್ದಾರೆ.
ಈ ವಂಚಕರ ಪತ್ತೆಗೆ ಮೈಸೂರು ಪೊಲೀಸರು ಬಲೆ ಬೀಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.