Refueling Car With Gasoline Pump Nozzle, Selective Focus on pump nozzle
Ashwaveega News 24×7 ಮಾರ್ಚ್ 04 – 2026 : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದಂತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಾಗಿದೆ. Strait of Hormuz ನಲ್ಲಿ 700ಕ್ಕೂ ಹೆಚ್ಚು ತೈಲ ಟ್ಯಾಂಕರ್ಗಳು ನಿಂತಲ್ಲೇ ನಿಂತಿವೆ .. ಇದರಿಂದ ಪೆಟ್ರೋಲ್ – ಡೀಸೆಲ್ ದರ ಏರಿಕೆಯ ಭೀತಿ ಮೂಡಿದೆ.
ಇಸ್ರೇಲ್ – ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್ ಪ್ರತಿತಂತ್ರ ಕೈಗೊಂಡಿದ್ದು, ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಿರುವುದಾಗಿ ಹೇಳಲಾಗಿದೆ . ಹಾರ್ಮೂಜ್ ಜಲಸಂಧಿ ಜಾಗತಿಕ ಕಚ್ಚಾತೈಲ ಸಾಗಣೆಯ ಪ್ರಮುಖ ದಾರಿಯಾಗಿದ್ದು, ಇಲ್ಲಿ ವ್ಯತ್ಯಯ ಉಂಟಾದರೆ ವಿಶ್ವದ ಹಲವು ದೇಶಗಳಿಗೆ ಪೂರೈಕೆ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ .
ಭಾರತ ಸೇರಿ ಅನೇಕ ರಾಷ್ಟ್ರಗಳು ಮಧ್ಯಪ್ರಾಚ್ಯದಿಂದ ಕಚ್ಚಾ ತೈಲವನ್ನು ಇದೇ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತವೆ . ಹಾರ್ಮೂಜ್ ಪ್ರದೇಶದಲ್ಲೇ ಭಾರತದ 30ಕ್ಕೂ ಹೆಚ್ಚು ಹಡಗುಗಳು ಸಿಲುಕಿರುವ ಸಾಧ್ಯತೆ ಇದೆ . ಇದರ ಮಧ್ಯೆ, ಇರಾನ್ ಹಡಗುಗಳನ್ನು ಧ್ವಂಸ ಮಾಡುವ ಎಚ್ಚರಿಕೆ ನೀಡಿರುವುದಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರ ಸ್ವರೂಪ ಪಡೆಯುತ್ತಿದೆ.
ಈ ಬೆಳವಣಿಗೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ Donald Trump, ಅಗತ್ಯವಿದ್ದರೆ ಹಾರ್ಮೂಜ್ ಪ್ರದೇಶಕ್ಕೆ ಅಮೆರಿಕ ಸೇನೆ ಕಳುಹಿಸುವುದಾಗಿ ಗುಡುಗಿದ್ದಾರೆ. “ಅಗತ್ಯಬಿದ್ರೆ ತಕ್ಷಣವೇ ಸೇನೆ ಕಳಿಸುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ .
ಒಟ್ಟಿನಲ್ಲಿ, ಹಾರ್ಮೂಜ್ ಜಲಸಂಧಿಯಲ್ಲಿ ಉಂಟಾದ ಈ ಅಸ್ಥಿರತೆ ಜಾಗತಿಕ ತೈಲ ಸರಬರಾಜು ಸರಪಳಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದ್ದು, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಆತಂಕ ಹೆಚ್ಚಿಸಿದೆ.
