
mysuru mad dog bites over 20 children
ಸುಮಾರು 20ಕ್ಕೂ ಹೆಚ್ಚು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಗುರುವಾರ ನಡೆದಿದೆ. ಕೊಪಗೊಂಡ ಗ್ರಾಮಸ್ಥರು ಒಂದು ಹುಚ್ಚುನಾಯಿಯನ್ನು ಕೊಂದು ಹಾಕಿದ್ದಾರೆ.
ಹುಲ್ಲಹಳ್ಳಿ ನಿವಾಸಿಗಳು ಹುಚ್ಚುನಾಯಿ ಹಾವಳಿಯಿಂದ ಬೇಸತ್ತಿದ್ದಾರೆ. ಇನ್ನೂ ಎರಡು ನಾಯಿಗಳು ಭೀತಿ ಹುಟ್ಟಿಸುತ್ತಿರುವುದಾಗಿ ತಿಳಿದು ಬಂದಿದೆ.
ಇತ್ತೀಚೆಗೆ ಮೈಸೂರಿನ ಮೇಟಗಳ್ಳಿ ದೇವಾಲಯದ ಬಸವ ಹುಚ್ಚುನಾಯಿ ಕಚ್ಚಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿತ್ತು. ಕೆಲವು ದಿನಗಳ ಹಿಂದೆ ಬಸವನಿಗೆ ಹುಚ್ಚುನಾಯಿ ಕಚ್ಚಿದೆ. ಸ್ಥಳೀಯರು ಸೇರಿ ಬಸವನನ್ನು ಕಟ್ಟಿ ಹಾಕಿ ಚಿಕಿತ್ಸೆ ಕೊಡಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.
ಆದರೆ ರೇಬಿಸ್ ಹೆಚ್ಚಾಗಿ ಬಸವ ನಾಯಿಯಂತೆ ಶಬ್ದ ಮಾಡುತ್ತಾ ಸ್ಥಳೀಯರಿಗೆ ಭೀತಿ ಉಂಟು ಮಾಡಿತ್ತು. ಪಶುವೈದ್ಯರು ಬಸವನಿಗೆ ಚಿಕಿತ್ಸೆ ಪ್ರಾರಂಭಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಸವ ಮೃತಪಟ್ಟಿತ್ತು.