
Newlywed killed, wife's role suspected in Andhra Pradesh
ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ನವವಿವಾಹಿತರ ಹತ್ಯೆ ಪ್ರಕರಣಗಳನ್ನು ನೋಡಿ ಪುರುಷರು ಮದುವೆಯಾಗಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಡೆದಿರುವ ಬಹುತೇಕ ಘಟನೆಗಳಲ್ಲಿ ಮಹಿಳೆಯು ವಿವಾಹೇತರ ಸಂಬಂಧ ಹೊಂದಿದ್ದು, ಅದಕ್ಕೆ ಗಂಡ ಅಡ್ಡಿ ಬರುತ್ತಾನೆಂದು ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವ ಘಟನೆಗಳೇ ಹೆಚ್ಚಿವೆ. ಈಗ ಹುಡುಗರ ಮನಸ್ಥಿತಿ ಏನಾಗಿದೆ ಎಂದರೆ ನೀನು ಯಾರೊಂದಿಗೆ ಬೇಕಾದ್ರೂ ಹೋಗು ನನ್ನನ್ನು ಜೀವಂತ ಬಿಟ್ಟುಬಿಡು ಎನ್ನುವಂತಾಗಿದೆ..
ಆಂಧ್ರಪ್ರದೇಶದ ಗದ್ವಾಲ್ ಪಟ್ಟಣದಲ್ಲಿ ನವವಿವಾಹಿತರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆಯನ್ನು ನೆನಪಿಸುತ್ತದೆ. ತೆಲಂಗಾಣದ ಗದ್ವಾಲ್ನ ರಾಜವೀಧಿನಗರದ 32 ವರ್ಷದ ತೇಜೇಶ್ವರ್ ನಂದ್ಯಾಲ್ ಜಿಲ್ಲೆಯ ಪನ್ಯಂ ಪೊಲೀಸ್ ಠಾಣೆ ವ್ಯಾಪ್ತಿಯ ಸುಗಲಿಮೆಟ್ಟದ ಎಚ್ಎನ್ಎಸ್ಎಸ್ ಕಾಲುವೆಯ ಬಳಿ ಶವವಾಗಿ ಪತ್ತೆಯಾಗಿದ್ದು, ಅವರ ಪತ್ನಿ ಮೇಲೆ ಅನುಮಾನ ಮೂಡಿದೆ.
ತೇಜೇಶ್ವರ್ ಕರ್ನೂಲಿನ ಐಶ್ವರ್ಯಾ ಎಂಬುವವರನ್ನು ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ವ್ಯಕ್ತಿಯ ಕುಟುಂಬವು ಅವರ ಪತ್ನಿ ಹಾಗೂ ಸಂಬಂಧಿಗಳ ವಿರುದ್ಧ ಬೆರಳು ಮಾಡಿ ತೋರಿಸುತ್ತಿದ್ದು. ತೇಜೇಶ್ವರ್ ಜೂನ್ 17ರಿಂದ ಕಾಣೆಯಾಗಿದ್ದರು. ಅವರ ಸಹೋದರ ತೇಜವರ್ಧನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಮೊಬೈಲ್ ಟ್ರ್ಯಾಕ್ ಮೂಲಕ ಜೂನ್ 21ರಂದು ಕಾಲುವೆ ಬಳಿ ಶವವನ್ನು ಪತ್ತೆ ಮಾಡಿದ್ದರು.
ಐಶ್ವರ್ಯಾ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಬ್ಯಾಂಕ್ ಮ್ಯಾನೇಜರ್ ಜತೆ ವಿವಾಹೇತರ ಸಂಬಂಧ ಹೊಂದಿದ್ದಾಳೆ. ತೇಜೇಶ್ವರ್ ಹಾಗೂ ತಮ್ಮ ಸಂಬಂಧಿಕರು ಅಡ್ಡಿಯಾಗಬಹುದು ಎಂದು ಭಾವಿಸಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂದು ತೇಜೇಶ್ವರ್ ಸಹೋದರ ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಕೆಗೆ ಆಗಾಗ ಬರುತ್ತಿದ್ದ ಫೋನ್ ಕರೆಗಳು, ರಹಸ್ಯ ಸಂಭಾಷಣೆಗಳು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿವೇ ಅಲ್ಲದೆ ತೇಜೇಶ್ವರ್ ಈ ಕುರಿತು ಪ್ರಶ್ನೆ ಮಾಡಿದಾಗಲೆಲ್ಲಾ ಆಕೆ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದೇನೆ ಎಂದು ಸಬೂಬು ಹೇಳುತ್ತಿದ್ದಳು. ಮೇ 18ರಂದು ಐಶ್ವರ್ಯಾ ತೇಜೇಶ್ವರ್ ಪ್ರೇಮ ವಿವಾಹವಾಗಿದ್ದರು… ಸದ್ಯಕ್ಕೆ ಪೊಲೀಸರು ವಿಚಾರಣೆ ನೆಡೆಸುತ್ತಿದ್ದಾರೆ.