ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧಿಸಿದ್ದು, ಆರೋಪಗಳು ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರು ಎನ್ನಲಾಗಿದೆ.
ಇಂದು ಶಿವಮೊಗ್ಗದ ಕುವೆಂಪು ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಶಿವಮೊಗ್ಗ ಬಸವನಗುಡಿ ಬಡಾವಣೆಯ ಭರತ್ ಟಿ (27), ರಾಗಿಗುಡ್ಡದ ನರಸಿಂಹ ಎಸ್ (39) ಇಬ್ಬರು ಅರೋಪಿಗಳನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಮಾಡಿ ಬಂದಿಸಿದ್ದಾರೆ. ಇನ್ನೂ ಬಂದಿತ ಆರೋಪಿಗಳಿಂದ 28,000 ರೂ.ಗಳ 668 ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 400 ನಗದನ್ನು ಗ್ರಾಮಾಂತರ ಪೊಲೀಸರು ಹಣ ಜಪ್ತಿ ಮಾಡಿ ಠಾಣೆಯಲ್ಲಿ 0300/2024 ಕಲಂ 20(b) (ii) A, 8(c) NDPS ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.