ಬೆಂಗಳೂರು : ಇತ್ತಿಚಿಗೆ ದೇಶಕ್ಕೆ ಮಾರಗವಾಗಿರೋ ಒಂದು ವಿಚಾರ ಅಂದ್ರೆ ಅದು ಸೈಬರ್ ಕ್ರೈಮ್, ನಿಮ್ಮನ್ನ ಕುಂತಲ್ಲೇ, ನಿಮಗೆ ಗೊತ್ತಾಗದ ಹಾಗೆ ನಿಮ್ಮ ಖಾತೆಯಲ್ಲಿರೋ ಹಣ ಗುಳುಂ ಮಾಡ್ತಾರೆ. ಇದೇ ಕಾರಣಕ್ಕೆ ಸದ್ಯ ನಗರಲ್ಲಿ ಡಿವಿಷನ್ಗೆ ಒಂದೊಂದು ಸೈಬರ್ ಠಾಣೆ ಓಪನ್ ಆಗಿದೆ.
ಅಷ್ಟೇ ಅಲ್ಲಾದೆ ಜಿಲ್ಲಾವಾರುಗಳಲ್ಲಿಯು ಕೂಡ ಸೈಬರ್ ಠಾಣೆಗಳನ್ನ ಸರ್ಕಾರ ತೆರೆದಿದೆ. ಆದ್ರೂ ಸೈಬರ್ ಪ್ರಕರಣಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ್ತಲೆ ಇವೆ. ಇನ್ನೂ ದುರಂತ ಅಂದ್ರೆ ವಿದ್ಯಾವಂತರೇ ಈ ಸೈಬರ್ ವಂಚನೆಗೆ ಬಲಿಯಾಗುತ್ತಿದ್ದು, ಸೈಬರ್ ವಂಚನೆಗೆ ಪ್ರಮುಖವಾಗಿ ಬಲಿಯಾಗೋದು ಶೇರ್ ಟ್ರೇಡಿಂಗ್ ನಲ್ಲಿ ಆಸಕ್ತಿ ಇರೋರು ಮಾತ್ರ. ಶೇರ್ ಮಾರ್ಕೆಟ್ ನಲ್ಲಿ ಹಣ ಡಬಲ್ ಆಗುತ್ತೆ ಅನ್ನೋ ಆಸೆಗೆ ಕೋಟಿ ಕೋಟಿ ಹಣ ಕಳೆದುಕೊಳ್ಳುತ್ತಿದ್ದಾರೆ.
ಇನ್ನೂ ಫೆಡೆಕ್ಸ್ ಕೊರಿಯರ್ ನಲ್ಲಿ ಡ್ರಗ್ ಬಂದಿದ್ದು, ನಿಮ್ಮನ್ನ ಡಿಜಿಟಲ್ ಅರೆಸ್ಟ್ ಮಾಡಲಾಗ್ತಿದೆ ಅಂತ ಪೊಲೀಸರ ವೇಷ ಧರಿಸಿ ಹಣ ಸುಲಿಗೆ ಮಾಡ್ತಾರೆ. ಇದು ಅಷ್ಟೇ ಅಲ್ಲಾದೆ ಓಟಿಪಿ ಹೆಸರಲ್ಲೂ ಹಣ ಲೂಟಿ ಮಾಡ್ತಾರೆ. ಇನ್ನೂ ಫೋಟೋ ಮಾರ್ಫಿಂಗ್ ಮಾಡಿ ಕೂಡ ಹಣ ಲೂಟಿ ಮಾಡ್ತಾರೆ.
ಬ್ಯಾಂಕ್ ಓಟಿಪಿ, ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಕೆವೈಸಿ ಅಪ್ಡೇಟ್ ಅಂತ ಕೂಡ ನಿಮ್ಮನ್ನ ಯಾಮಾರಿಸ್ತಾರೆ. ಸದ್ಯ ಈ ಬಗ್ಗೆ ಖುದ್ದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಕಾಳಜಿ ವಹಿಸಿ ಶಾಲಾ ಕಾಲೇಜುಗಳಲ್ಲಿ ಆಯಾ ವ್ಯಾಪ್ತಿ ಪೊಲೀಸ್ರು ಮಕ್ಕಳಲ್ಲಿ ಅರಿವು ಮೂಡಿಸಲು ತಾಕೀತು ಮಾಡಿದ್ದಾರೆ. ಅದ್ರಂತೆ ಶಾಲಾ ಕಾಲೇಜುಗಳಲ್ಲಿ ಪೊಲೀಸ್ರು ಅರಿವು ಮೂಡಿಸೋ ಕೆಲಸ ಮಾಡ್ತಿದ್ದಾರೆ.ಈ ಮಧ್ಯೆ ಭಿತ್ತಿ ಪತ್ರಗಳನ್ನ ಹಂಚಿ ಸೈಬರ್ ಕ್ರೈಮ್ ಕುರಿತು ಅರಿವು ಮೂಡಿಸುತ್ತಿದ್ದಾರೆ.