Ashwaveega News 24×7 ಫೆಬ್ರವರಿ 26 – 2026 ಬೆಂಗಳೂರು : ಒಂದೇ ದಿನ ಎರಡೆರಡು ಬಾರಿ ರಶ್ಮಿಕಾ–ವಿಜಯ್ ಕಲ್ಯಾಣ! ತೆಲುಗು–ಕೊಡವ ಸಂಪ್ರದಾಯದಲ್ಲಿ ವಿರೋಶ್ ಮದುವೆ
ದಕ್ಷಿಣ ಭಾರತದ ಜನಪ್ರಿಯ ತಾರೆಗಳು Rashmika Mandanna ಮತ್ತು Vijay Deverakonda ವಿವಾಹ ಬಂಧನದ ಮೂಲಕ ಒಂದಾಗಿದ್ದಾರೆ ಎಂಬ ಸುದ್ದಿ ಸಿನಿ ವಲಯದಲ್ಲಿ ಸಂಭ್ರಮ ಮೂಡಿಸಿದೆ. ರಾಜಸ್ಥಾನದ Udaipur ನಲ್ಲಿ ಅದ್ಧೂರಿಯಾಗಿ ಮದುವೆ ಸಂಭ್ರಮ ನಡೆದಿದೆ .
ಬೆಳಗ್ಗೆ 10.10ಕ್ಕೆ ಸಲ್ಲುವ ಶುಭ ಲಗ್ನದಲ್ಲಿ ತೆಲಂಗಾಣದ ಹಿಂದೂ ಸಂಪ್ರದಾಯದಂತೆ ಮೊದಲ ಮದುವೆ ನಡೆದಿದೆ. ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಅವರ ಕೊರಳಿಗೆ ತಾಳಿ ಕಟ್ಟಿದರೆಂದು ತಿಳಿದುಬಂದಿದೆ. ಬಹುವರ್ಷಗಳ ಸೆಲೆಬ್ರಿಟಿ ಪ್ರೀತಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಈ ಜೋಡಿ ‘Geetha Govindam’ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಇದೇ ಚಿತ್ರದ ನಂತರ ಅವರ ಸ್ನೇಹ ಪ್ರೀತಿಯಾಗಿ ಬೆಳೆದಿತ್ತು ಎಂಬ ಮಾತು ಹರಿದಾಡಿತ್ತು.
ಇದೀಗ ಸಂಜೆ 4.30ಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಕೊಡವ ಸಂಪ್ರದಾಯದಂತೆ ಮತ್ತೊಮ್ಮೆ ಸಪ್ತಪದಿ ನಡೆಯುತ್ತಿದೆ ಎನ್ನಲಾಗಿದೆ. ರಶ್ಮಿಕಾ ಕುಟುಂಬ ಮೂಲಗಳನ್ನು ಗೌರವಿಸಿ ಕೊಡವ ಪರಂಪರೆಯಂತೆ ವಿಧಿವಿಧಾನಗಳು ನಡೆಯುತ್ತಿವೆ.
ಒಂದೇ ದಿನ ಎರಡು ಸಂಪ್ರದಾಯಗಳಲ್ಲಿ ಮದುವೆ ನೆರವೇರಿಸಿರುವುದು ವಿಶೇಷವಾಗಿದ್ದು, ಕುಟುಂಬ ಪರಂಪರೆಗಳಿಗೆ ಆದ್ಯತೆ ನೀಡಲಾಗಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಈ ವಿರೋಶ್ ಕಲ್ಯಾಣಕ್ಕೆ ಆಪ್ತರು ಮತ್ತು ಸಿನಿ ಗಣ್ಯರು ಸಾಕ್ಷಿಯಾಗಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ, ಬಹುಕಾಲದ ಪ್ರೇಮಕ್ಕೆ ಈಗ ಗೃಹಸ್ಥಾಶ್ರಮದ ಮುದ್ರೆ ಬಿದ್ದಿದೆ.
