ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿ ಮುಚ್ಚಲು ನೀಡಿದ ಡೆಡ್ ಲೈನ್ ಮುಗಿದರೂ, ಸಾವಿರಾರು ಗುಂಡಿಗಳು ಇನ್ನೂ ಮುಚ್ಚಿಲ್ಲ. ಉಪಮುಖ್ಯಮಂತ್ರಿ ಆದೇಶಕ್ಕೂ ತಲೆಕೆಡಿಸದ ಪಾಲಿಕೆ ಅಧಿಕಾರಿಗಳು, ಸಚಿವರಿಗೂ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ.
ಹೆಚ್ಚಾಗಿ ಪ್ರಭಾವಿ ಅಧಿಕಾರಿಗಳಂತೆ ವರ್ತಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳು, “ಇಗಾಗಲೇ 6 ಸಾವಿರ ಗುಂಡಿಗಳನ್ನು ಮುಚ್ಚಿದೇವಿ” ಎಂದು ಹೇಳುತ್ತಾ ಇದ್ದರೂ, ಸಿಲಿಕಾನ್ ಸಿಟಿಯಲ್ಲಿ ಇನ್ನೂ ಸಾವಿರಾರು ಗುಂಡಿಗಳು ಮುಚ್ಚಬೇಕಾಗಿದೆ.
ಮಾಧವ ನಗರದಿಂದ ಕುಮಾರ್ ಕೃಪ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾಧವ ನಗರದ ಮುಖ್ಯ ರಸ್ತೆಯಲ್ಲಿ ಯಮಸ್ವರೂಪಿ ಗುಂಡಿಗಳು ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದರೂ, ಅವು ಇನ್ನೂ ಹಾಗೆಯೇ ಉಳಿದಿವೆ.
ಪ್ರತಿದಿನ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಚಿಕ್ಕ ಪುಟ್ಟ ರಸ್ತೆಗಳ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿರುವ ಕಾರಣ, ಸಾರ್ವಜನಿಕರು ತಮ್ಮ ಜೀವವನ್ನು ಅಪಾಯಕ್ಕೊಳಪಡಿಸುತ್ತಿದ್ದಾರೆ.
ಗುಂಡಿಗಳಿಂದ ತೊಂದರೆ ಅನುಭವಿಸುತ್ತಿರುವ ವಯೋವೃದ್ಧರು ಹಾಗೂ ಗರ್ಭಿಣಿಯರು, ಈ ರಸ್ತೆಯಲ್ಲಿ ಪ್ರಯಾಣಿಸುವಾಗ ನರಳಾಟ ಅನುಭವಿಸುತ್ತಿದ್ದಾರೆ.