ಪ್ರಯಾಗ್ರಾಜ್ನ ಕುಂಭಮೇಳದಲ್ಲಿ ಸಂಭವಿಸಿದ ಘೋರ ದರಂತಕ್ಕೆ ಸರ್ಕಾರವಷ್ಟೇ ಹೊಣೆಯೇ..? ಸಾರ್ವಜನಿಕೆ ಹೊಣೆಗಾರಿಕೆ ಏನೂ ಇಲ್ಲವೇ..? ಸರ್ಕಾರವನ್ನು ದೂರಿದರೆ ನಮ್ಮ ಜವಾಬ್ದಾರಿ ಮುಗಿಯಿತೇ..? ಈ ದೇಶದ ಜವಾಬ್ದಾರಿ ಇರಲಿ, ಕನಿಷ್ಠ ನಮ್ಮ ಜವಾಬ್ದಾರಿಯನ್ನೂ ನಾವು ಹೊರದಿದ್ದರೆ ಹೇಗೆ..? ಜನರೂ ವಿವೇಚನೆಯಿಂದ ವರ್ತಿಸಬೇಕಲ್ಲವೇ…?
ಕೋಟಿಗಟ್ಟಲೆ ಜನ ಸೇರಿದ ಸ್ಥಳಗಳಲ್ಲಿ ಕೆಲವೊಮ್ಮೆ ಕಾಲ್ತುಳಿತ ಸಂಭವಿಸುವುದು ಸಾಮಾನ್ಯವಾಗಿರುತ್ತದೆ. ಇಷ್ಟೊಂದು ಜನ ಸೇರುತ್ತಿರುವುದು ಅನಿರೀಕ್ಷಿತವೇನೂ ಅಲ್ಲ. ೪೫ ದಿನಗಳ ಕಾಲ ನಡೆಯುವ ಈ ಕುಂಭಮೇಳ ೧೪೪ ವರ್ಷಗಳ ನಂತರ ನಡೆಯುತ್ತಿರುವುದರಿಂದ ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಭಕ್ತರು ಜಮಾಯಿಸುವ ಬಗ್ಗೆ ಸರ್ಕಾರಕ್ಕೆ ಮೊದಲೇ ಮಾಹಿತಿ ಇದ್ದುದರಿಂದ ಯೋಗಿ ಆದಿತ್ಯನಾಥ್ರ ಸರ್ಕಾರ ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿಕೊಂಡೇ ಇತ್ತು. ಆದಾಗ್ಯೂ ಈ ದುರಂತ ನಡೆದು ಹೋಗಿದೆ. ಸದ್ಯದ ವರದಿಯ ಪ್ರಕಾರ, ಮೌನಿ ಅಮಾವಾಸ್ಯೆಯ ಮುನ್ನಾ ದಿನ, ಜನವರಿ ೨೮ರ ಮಂಗಳವಾರ ಬೆಳಗಿನಜಾವ ಸ್ನಾನದ ವೇಳೆ ನಡೆದ ಈ ದುರಂತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ೩೦ ಜನ ಸಾವನ್ನಪ್ಪಿದ್ದರೆ, ಸುಮಾರು ೬೦ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ಅದರಲ್ಲಿ ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂಬ ಮಾಹಿತಿಯೂ ಇದೆ. ಕರ್ನಾಟಕದ ಬೆಳಗಾವಿಯ ನಾಲ್ವರು ಜೀವ ತೆತ್ತಿದ್ದಾರೆ. ಅದರಲ್ಲಿ ಇಬ್ಬರು ತಾಯಿ ಮತ್ತು ಮಗಳು, ಒಬ್ಬರು ಮಹಿಳೆ ಹಾಗೂ ಒಬ್ಬರು ಪುರುಷರು. ಇಷ್ಟಾದರೂ ನೂಕುನುಗ್ಗಲು ಹೇಗೆ ಮತ್ತು ಏಕೆ ಆಯಿತು ಎಂಬ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ, ಭಕ್ತರು ಬೀಡುಬಿಟ್ಟ ಸ್ಥಳಕ್ಕೂ, ಸ್ನಾನ ಘಟ್ಟಕ್ಕೂ ಸುಮಾರು ಆರೆಂಟು ಕಿಲೊಮೀಟರ್ ದೂರ ಇರುವುದರಿಂದ ಬೆಳಗ್ಗೆ ಹೋಗಿ ಸ್ನಾನ ಮಾಡುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಅನೇಕರು ಮಂಗಳವಾರ ರಾತ್ರಿಯೇ ಹೋಗಿ ತ್ರಿವೇಣಿ ಸಂಗಮದ ಬಳಿಯೇ ನದಿ ದಂಡೆಯ ಮೇಲೆ ಮಲಗಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಿಯೇ ಮಲಗಿದ್ದರೆ, ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ದೇವರ ದರ್ಶನ ಪಡೆಯಬಹುದು ಎಂಬುದು ಅವರೆಲ್ಲರ ಉದ್ದೇಶವಾಗಿತ್ತು. ಆದರೆ, ದುರದೃಷ್ಟವಶಾತ್ ಮಲಗಿದ್ದವರೆಲ್ಲರೂ ಎದ್ದು ಸ್ನಾನಘಟ್ಟಗಳಿಗೆ ಹೋಗುವ ಮುನ್ನವೇ ಹಿಂದಿನಿಂದ ಜನಸಾಗರವೇ ಹರಿದು ಬರಲಾರಂಭಿಸಿತು.
ಹಿಂದಿದ್ದವರ ತಳ್ಳುವಿಕೆಯಿಂದಾಗಿ ಮುಂಚೂಣಿಯಲ್ಲಿದ್ದವರಿಗೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಸಮುದ್ರದ ಅಲೆಯಂತೆ ಭಕ್ತರ ಗುಂಪು ನುಗ್ಗಿ ಬಂದಿತ್ತು. ಹಾಗೆ ಬಂದವರ ಕಾಲಿಗೆ ಸಿಕ್ಕವರ ನರಳಾಟ-ಚೀರಾಟಗಳು ಅಪಾರ ಸಂಖ್ಯೆಯಲ್ಲಿ ನುಗ್ಗಿ ಬಂದ ಜನಸಮೂಹವನ್ನು ದಿಗ್ಭçಮೆಗೆ ತಳ್ಳಿತು. ಇದರಿಂದ ಜನ ಗಾಬರಿಗೊಂಡು ಕೆಳಗೆ ಬಿದ್ದವರನ್ನು ತುಳಿದುಕೊಂಡೇ ದಿಕ್ಕಾಪಾಲಾಗಿ ಓಡತೊಡಗಿದರು. ನಿಂತು ಪರಿಶೀಲಿಸಿ ವಿಷಯವನ್ನು ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ ಆ ಕ್ಷಣಕ್ಕೆ ಅಲ್ಲಿ ಯಾರಿಗೂ ಇರಲಿಲ್ಲ ಮತ್ತು ಹಿಂದಿನಿAದ ನುಗ್ಗಿ ಬರುತ್ತಿರುವ ಜನಸಾಗರವನ್ನು ತಡೆಯಲು ಯಾರಿಗೂ ಸಾಧ್ಯವಾಗುವಂತಿರಲಿಲ್ಲ. ಕತ್ತಲೆ ಬೇರೆ. ಎಲ್ಲೆಲ್ಲೂ ಜನಸಾಗರ. ಕಣ್ಣು ಹಾಯಿಸಿದತ್ತೆಲ್ಲಾ ಜನವೋ ಜನ. ಅಂತೂ ನಡೆಯಬಾರದ್ದು ನಡೆದೇ ಹೋಗಿಬಿಟ್ಟಿತು. ಪುಣ್ಯಸ್ನಾನಕ್ಕೆಂದು ಹೋದವರು ಸ್ನಾನಕ್ಕೂ ಮೊದಲೇ ಮರಳಿ ಬಾರದ ಜಾಗಕ್ಕೆ ಹೋಗಿಬಿಟ್ಟರು. ಇಂದಿನ ವರೆಗಿನ ಲೆಕ್ಕದಂತೆ ೩೦ ಜೀವಗಳು ಬಲಿಯಾದವು. ಆದರೆ ಸ್ಥಳದಲ್ಲಿರು ವ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯಕೀಯ ತಂಡಗಳನ್ನು ಉಲ್ಲೇಖಿಸಿ ಹೇಳುವುದಾದರೆ, ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡವರೆಷ್ಟು ಎಂಬ ಬಗ್ಗೆ ಇನ್ನೂ ಸರಿಯಾದ ಲೆಕ್ಕ ಸಿಕ್ಕಿಲ್ಲ. ಗಾಯಾಳುಗಳ ಸಂಖ್ಯೆಯೂ ಅಷ್ಟೇ.
ಯಾರು ಹೊಣೆ..?

ಇಲ್ಲಿ ಈ ದುರ್ಘಟನೆಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು..? ಸರ್ಕಾರವನ್ನೇ…ಜಿಲ್ಲಾಡಳಿತಗಳನ್ನೇ….ಪೊಲೀಸರನ್ನೇ…. ಯಾರನ್ನು, ಸಾರ್ವಜನಿಕರನ್ನೇ… ಯಾರನ್ನು…? ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿರುತ್ತಿದ್ದರೆ ಹೀಗಾಗುತ್ತಿರಲಿಲ್ಲ, ಇಂತಹ ಕರಾಳ ದುರಂತವೊAದು ಘಟಿಸುತ್ತಿರಲ್ಲ. ಯೋಗಿ ಆದಿತ್ಯನಾಥ್ ಅವರ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಲಿಲ್ಲ ಎಂಬುದು ಒಂದು ದೂರು. ಹಾಗಾದರೆ ಅದು ನಿಜವೇ…? ಸಾಮಾನ್ಯವಾಗಿ ಯಾವುದೇ ಒಮದು ಇಂತಹ ದುರಂತದ ಹೊಣೆಯನ್ನು ಬಹಳ ಸುಲಭವಾಗಿ ಸರ್ಕಾರದ ಮೇಲೆ ತಪ್ಪು ಹೊರಿಸಿ ಮಾತನಾಡಲಿಕ್ಕಾಗದು. ನಿಜಕ್ಕೂ, ಯೋಗಿ ಸರ್ಕಾರ ಸಾಕಷ್ಟು ವ್ಯವಸ್ಥೆ ಮಾಡಿತ್ತು. ಪೊಲೀಸ್ ಇಲಾಖೆಗೆ ಎಲ್ಲಾ ಸೂಚನೆಗಳನ್ನೂ ನೀಡಿತ್ತು. ಸ್ವತಃ ಆದಿತ್ಯನಾಥ್ ಅವರೇ ಖುದ್ದಾಗಿ ಸ್ಥಳಕ್ಕೆ ಭೇಟಿ ನಿಡಿ ಎಲ್ಲಾ ವ್ಯವಸ್ಥೆಗಳನ್ನೂ ಪರಿಶೀಲನೆ ನಡೆಸಿ ಭದ್ರತೆ, ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಂಡಿದ್ದರು. ಎಲ್ಲವೂ ಸರಿಯಾಗಿಯೇ ಇತ್ತು. ಪ್ರಯಾಗ್ರಾಜ್ನ ಕುಂಭಮೇಳಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲೆಂದು ಸರ್ಕಾರವೇ ಆರಂಭಿಸಿದ್ದ ವಿಶೇಷ ರೈಲುಗಳು, ಬಸ್ಸುಗಳು ರಾಜ್ಯಾದ್ಯಂತ ಸಂಚರಿಸಿ ಭಕ್ತರನ್ನು ಕರೆತರುವ ಕೆಲಸ ಮಾಡುತ್ತಿದ್ದವು. (ಈ ದುರಂತದ ನಂತರ ವಿಶೇಷ ರೈಲುಗಳ ಓಡಾಟವನ್ನು ನಿಲ್ಲಿಸಲಾಗಿದೆ)ಸಾಕಷ್ಟು ಸಂಖ್ಯೆಯಲ್ಲಿ ಭಕ್ತರೂ ಆಗಮಿಸಿದ್ದರು, ಪೊಲೀಸರಂತೂ ಹೆಜ್ಜೆಹೆಜ್ಜೆಗೂ ನಿಂತು ಜನರನ್ನು ನಿಯಂತ್ರಿಸುತ್ತಿದ್ದರು.
ನದೀದಂಡೆ ಯಲ್ಲಿ ಸ್ನಾನಕ್ಕೆ ತೆರಳಿದ ಸಂದರ್ಭ ಎಲ್ಲರೂ ಅತ್ಯಂತ ಜಾಗರೂಕತೆಯಿಂದ ಇರುವಂತೆ ಹಲವು ತಂಡಗಳು `ಅನೌನ್ಸ್ಮೆಂಟ್’ ಕೂಡ ಮಾಡುತ್ತಲೇ ಇದ್ದವು. ಇಷ್ಟೆಲ್ಲದರ ಹೊರತಾಗಿಯೂ ಇಂಥದೊAದು ಅನಾಹುತ ನಡೆದೇ ಹೋಗಿದೆ. ಸಾಮಾನ್ಯವಾಗಿ ಎಲ್ಲದಕ್ಕೂ ಸರ್ಕಾರಗಳನ್ನೇ ದೂರುವುದು, ತನ್ಮೂಲಕ ನಮ್ಮ ಜವಾಬ್ದಾರಿ ಮರೆಮಾಚುವುದು ರೂಢಿ. ಸರ್ಕಾರ ಇನ್ನೂ ಏನು ಮಾಡಬೇಕಾಗಿತ್ತು ಎಂಬುದನ್ನೂ ಕೇಳಿಕೊಳ್ಳಬೇಕು. ಎಲ್ಲವನ್ನೂ ಸರ್ಕಾರಗಳೇ ಮಾಡಬೇಕು. ಇದೆಲ್ಲವೂ ಸರ್ಕಾರದ್ದೇ ಹೊಣೆ ಎನ್ನುವುದು ಸುಲಭ. ಹಾಗಾದರೆ ಜನರದ್ದೇನೂ ಜವಾಬ್ದಾರಿಯೇ ಇಲ್ಲವೇ..? ಈ ಘಟನೆಯ ಬಗ್ಗೆ ಹೇಳುವುದಾದರೆ, ಇಲ್ಲಿ ಸಾರ್ವಜನಿಕರದ್ದೇ ಹೆಚ್ಚು ಹೊಣೆಗಾರಿಕೆ ಇರಬೇಕು. ಜನರಿಗೆ ತಮ್ಮ ಜೀವದ ಬಗ್ಗೆ ತಮಗೇ ಕಾಳಜಿಯಿಲ್ಲ ಎಂದರೆ ಹೇಗೆ..? ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುವುದು, ಪುಣ್ಯಸ್ನಾನ ಮಾಡುವುದು, ತೀರ್ಥಯಾತ್ರೆ ಮಾಡುವುದು, ಪ್ರವಾಸ ಹೋಗುವುದು ಎಲ್ಲವೂ ಜನರ ಸ್ವತಂತ್ರವೇ.

ಆದರೆ ಕೋಟಿಗಟ್ಟಲೆ ಜನ ಸೇರುವಾಗ ನಮಗೂ ಆ ಬಗ್ಗೆ ಪ್ರಜ್ಞೆ ಇರಬೇಕಲ್ಲವೇ… ಹೀಗೆ ಹೊರಗೆ ಹೋದಾಗ ನಮ್ಮ ಜೀವಕ್ಕೆ ನಾವೇ ಹೊಣೆಗಾರರಾಗಬೇಕೆನ್ನುವ ವಿವೇಕ, ವಿವೇಚನೆ ನಮ್ಮಲ್ಲಿರಬೇಕಲ್ಲವೇ… ನಮ್ಮ ಹೊಣೆಗಾರಿಕೆಯನ್ನು ನಾವು ಸರಿಯಾಗಿ ನಿಭಾಯಿಸಿ ನಂತರ ಬೇರೊಬ್ಬರ ಹೊಣೆಗಾರಿಕೆಯನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ತುರ್ತುಸ್ಥಿತಿ ಎದುರಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಿತ್ತು ಸರ್ಕಾರ. ಆದರೆ ದುರದೃಷ್ಟ ನೋಡಿ ಹೇಗಿದೆ. ಗಾಯಾಳುಗಳನ್ನು ಸಾಗಿಸುವ ಆ ಆಂಬುಲೆನ್ಸ್ಗೇ ಬೆಂಕಿ ಹೊತ್ತಿಕೊಳ್ಳಬೇಕೇ… ಒಟ್ಟಾರೆ ಇಂಥದೊAದು ದುರಂತ ಘಟಿಸಬಾರದಿತ್ತು ಘಟಿಸಿಬಿಟ್ಟಿದೆ. ಈ ವಿಷಯದಲ್ಲಿ ಸರ್ಕಾರವನ್ನಷ್ಟೇ ದೂರುತ್ತಾ ಕುಳಿತರೆ ಸಾಕೇ… ಜನತೆಯ ಜವಾಬ್ದಾರಿ ಏನೂ ಇಲ್ಲವೇ..? ಈ ಪ್ರಶ್ನೆಗಳಿಗೆ ಸಾರ್ವಜನಿಕರು ಉತ್ತರಿಸಬೇಕು