
Modi addresses the Aadi Thiruvathirai Festival
Ashwaveega News 24×7 ಜು. 27: ಚೋಳರ ಅರಸ ರಾಜೇಂದ್ರ ಚೋಳ-I ಅವರ ಜನ್ಮದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಐತಿಹಾಸಿಕ ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿದರು.
ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಪ್ರಧಾನಿಯವರನ್ನು ದೇವಾಲಯದ ಅರ್ಚಕರು “ಪೂರ್ಣ ಕುಂಭ” ದೊಂದಿಗೆ ಬರಮಾಡಿಕೊಂಡರು. ಆದಿ ತಿರುಪತಿರೈ ಉತ್ಸವದಲ್ಲಿ ಭಾಗವಹಿಸಿದಾಗ ಪ್ರಧಾನಿ ಮೋದಿ ಬಿಳಿ ಧೋತಿ, ಬಿಳಿ ಶರ್ಟ್ ಮತ್ತು ಅಂಗವಸ್ತ್ರವನ್ನು ಧರಿಸಿದ್ದರು.
ವೈದಿಕ ಮತ್ತು ಶೈವ ತಿರುಮುರೈ ಮಂತ್ರಗಳ ನಡುವೆ, ಪ್ರಧಾನಿ ಮೋದಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಪವಿತ್ರ ಗಂಗಾ ನದಿಯ ನೀರಿನಿಂದ ತುಂಬಿದ್ದ ಕಲಶ ತಂದರು.
ಯುನೆಸ್ಕೋ ಪರಂಪರೆಯ ತಾಣವಾದ ಚೋಳರ ದೇವಾಲಯಗಳ ಭಾಗವಾಗಿರುವ ಈ ದೇವಾಲಯದ ಒಳ ಕಾರಿಡಾರ್ ಅನ್ನು ಪ್ರಧಾನಿ ಪ್ರದಕ್ಷಿಣೆ ಹಾಕಿದರು. ಅವರು “ದೀಪರಾಧನೈ” ನಡೆಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
“ನಾನು 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ, ದೇಶದ ಪ್ರಗತಿಗಾಗಿ ಪ್ರಾರ್ಥಿಸಿದೆ. “ರಾಜ ರಾಜ ಚೋಳ, ರಾಜೇಂದ್ರ ಚೋಳ ಅವರ ಹೆಸರುಗಳು ಭಾರತದ ಗುರುತು, ಹೆಮ್ಮೆಗೆ ಸಮಾನಾರ್ಥಕವಾಗಿವೆ” ಎಂದು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಹೇಳಿದರು.
ಪ್ರಧಾನಮಂತ್ರಿ ಅವರು ಭಾರತೀಯ ಪುರಾತತ್ವ ಸಮೀಕ್ಷೆಯು ಚೋಳ ಶೈವ ಧರ್ಮ ಮತ್ತು ವಾಸ್ತುಶಿಲ್ಪದ ಕುರಿತು ಆಯೋಜಿಸಿದ್ದ ಪ್ರದರ್ಶನಕ್ಕೂ ಭೇಟಿ ನೀಡಿದರು. ಪ್ರಧಾನಿ ಮೋದಿ ಅವರ ಭೇಟಿಯು ಭಾರತದ ಪ್ರಾಚೀನ ನಾಗರಿಕತೆಯ ಪರಂಪರೆ ಮತ್ತು ಪ್ರಾದೇಶಿಕ ಗೌರವ ಹೆಚ್ಚಿಸಲು ಸರ್ಕಾರದ ಪ್ರಯತ್ನವನ್ನು ಎತ್ತಿ ತೋರಿಸುತ್ತದೆ.