
rajath kishan react
Ashwaveega News 24×7 ಅ. 07: ಕಳೆದ ದಿನ ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಕಿಶನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಧರ್ಮಸ್ಥಳಕ್ಕೆ ಹೋಗಿದ್ದು, ಸೌಜನ್ಯ ಕೇಸ್ನಲ್ಲಿ ನ್ಯಾಯ ಕೇಳೋಕೆ ಮಾತ್ರ.
ನಾನು ಯಾವತ್ತೂ ಧರ್ಮಸ್ಥಳದ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ನಾನು ಶಿವಭಕ್ತ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ತಪ್ಪಾಗಿ ಮಾತನಾಡಿದಾಗ ನನಗೂ ಕೋಪ ಬರುತ್ತೆ. ನಾನು ಸೌಜನ್ಯ ಕುಟುಂಬಸ್ಥರನ್ನು ಭೇಟಿ ಮಾಡೋಕೆ ಹೋಗಿದ್ದೆ. ಈ ವೇಳೆ ಯೂಟ್ಯೂಬರ್ಸ್ಗೆ ಮಾತನಾಡುತ್ತಿದ್ದಾಗಲೇ ಗುಂಪು ಬಂತು. ಕಾರು ಮತ್ತು ಬೈಕ್ನಲ್ಲಿ ಬಂದವರಿಂದ ಹಲ್ಲೆ ನಡೆಯಿತು ಎಂದು ತಿಳಿಸಿದ್ದಾರೆ.
ಯೂಟ್ಯೂಬರ್ಸ್ ಮೇಲೆ ಗುಂಪು ಎರಗಿತು. ಸುಮಾರು 50-60 ಜನ ಬಂದು ಅಟ್ಯಾಕ್ ಮಾಡಿದ್ದರು. ಅಲ್ಲಿ ನನ್ನ ಮೇಲೆ ಯಾರು ಬೆರಳೆತ್ತಿ ತೋರಿಸಿಲ್ಲ, ಏನೂ ಮಾಡಿಲ್ಲ. ಆದರೆ, ಯೂಟ್ಯೂಬರ್ಸ್ ಬಗ್ಗೆ ಮಾತ್ರ ಅವರು ಕೋಪ ತೋರಿಸಿದ್ದರು.
ಸೌಜನ್ಯ ಕೇಸ್ನಲ್ಲಿ ನ್ಯಾಯ ಕೊಡಿಸಿ ಅಂತಾ ಕೇಳೋಕೆ ಹೋಗಿದ್ದೆ. ಸೌಜನ್ಯ ಬಗ್ಗೆ ಕೇಳಿದ್ದರೆ ಅವರೆಲ್ಲಾ ಧರ್ಮ ಅಂತಾ ಮಾತಾಡಿದ್ದರು ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು ನಾನು ನೇರವಾಗಿ ಹೋಗಿ ದೂರು ದಾಖಲು ಮಾಡುತ್ತೇನೆ. ದಾರಿಯಲ್ಲಿ ಕೂತು ಪ್ರತಿಭಟನೆ ಮಾಡೋದು, ಬಾಯಿ ಬಾಯಿ ಬಡೆದುಕೊಳ್ಳುವುದು ಮಾಡುವುದಿಲ್ಲ. ಕಾನೂನು ರೀತಿಯಾಗಿ ಸೈಲೆಂಟ್ ಆಗಿ ದೂರು ದಾಖಲಿಸುತ್ತೇನೆ ಎಂದಿದ್ದಾರೆ.