
2024-2025ರ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಪೈನಾಲ್ ಹಾದಿ ಕಠಿಣವಾಗಿದೆ. ಆಡಿರುವ 6 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು ಒಟ್ಟು 19 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ. ಹರ್ಯಾಣ ಹಾಗೂ ಕೇರಳ ತಂಡಗಳು ಮೊದಲ ಎರಡು ಸ್ಥಾನದಲ್ಲಿವೆ. ಒಂದು ವೇಳೆ ಕೇರಳ ತಂಡ ಮಧ್ಯಪ್ರದೇಶ ವಿರುದ್ದ ಸೋತಿದ್ದರೆ ರಾಜ್ಯ ತಂಡ ಯಾವುದೇ ಅಡತಡೆಯಿಲ್ಲದೇ ಮುಂದಿನ ಹಂತಕ್ಕೆ ತಲುಪುತ್ತಿತ್ತು.ಆದರೆ ಆ ಪಂದ್ಯದಲ್ಲಿ ಕೇರಳ ಮಧ್ಯಪ್ರದೇಶ ವಿರುದ್ದ ಹೋರಾಟ ನಡೆಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡ್ರಾ ದೊಂದಿಗೆ ಕೇರಳ ತಂಡ 21 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ತಂಡ ಕ್ವಾರ್ಟರ್ ಫೈನಾಲ್ ಪ್ರವೇಶಿಸಬೇಕಾದರೆ ಹರ್ಯಾಣ ವಿರುದ್ದ ನಡೆಯುವ ಪಂದ್ಯದಲ್ಲಿ ಬೋನಸ್ ಅಂಕದೊಂದಿಗೆ ಗೆಲ್ಲುವ ಒತ್ತಡದಲ್ಲಿದೆ. ಜನವರಿ 30 ರಿಂದ ಪಂದ್ಯ ಬೆಂಗಳೂರಿನಲ್ಲಿ ಪಂದ್ಯ ಆರಂಭವಾಗಲಿದೆ.
