
ಐಪಿಎಲ್ 18ರ ಆವೃತ್ತಿಗೆ ದಿನಗಣನೇ ಆರಂಭವಾಗಿದೆ. ಮಾರ್ಚ್ 21ರಿಂದ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. 10 ಫ್ರಾಂಚೈಸಿಗಳು ಕೂಡ ಬೇಕಾದ ತಯಾರಿಯನ್ನು ನಡೆಸುಕೊಳ್ಳುತ್ತಿವೆ. ಈ ನಡುವೆ ಆರ್ಸಿಬಿ ತಂಡಕ್ಕೆ ನಾಯಕ ಯಾರಾಗುತ್ತಾರೆ ಎಂಬ ಪ್ರಶ್ನೆ ಹಾಗೇ ಉಳಿದಿದೆ. ಕೆಲ ಮಾಹಿತಿ ಮೂಲಗಳ ಪ್ರಕಾರ ವಿರಾಟ್ ಕೊಹ್ಲಿಯೇ ತಂಡದ ಕ್ಯಾಪ್ಟನ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಮತ್ತಷ್ಟು ಬಲವಾಗಿ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಯೇ ಎಂದಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವೆಯ 2ನೇ ಏಕದಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಹಾಗೂ ಕೊಹ್ಲಿ ಇಬ್ಬರು ಪರಸ್ಪರ ಕೆಲ ಹೊತ್ತು ಮಾತನಾಡಿದರು.ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುರೇಶ್ ರೈನಾ ಆರ್ಸಿಬಿ ನಾಯಕ ತಮ್ಮ ತಂಡದ ಆಟಗಾರನ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಆರ್ಸಿಬಿ ನಾಯಕ ಕೊಹ್ಲಿಯೇ ಎಂಬಂತೆ ಹೇಳಿದ್ದಾರೆ. ಸುರೇಶ್ ರೈನಾ ಮತ್ತು ಕೊಹ್ಲಿ ಭಾರತ ತಂಡಕ್ಕೆ ಒಟ್ಟಿಗೆ ಆಡಿದ್ದರು. ಕೊಹ್ಲಿಗೆ ಆಪ್ತರೂ ಕೂಡ ಹೀಗಾಗಿ ರೈನಾ ಬಹಿರಂಗವಾಗಿ ಹೇಳಿರುವುದು ಸತ್ಯಕ್ಕೆ ಹತ್ತಿರವಾದದ್ದು ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಐಪಿಎಲ್ನಲ್ಲಿ ಕಿಂಗ್ ಕೊಹ್ಲಿ ಒಟ್ಟು 143 ಪಂದ್ಯಗಳನ್ಜು ಮುನ್ನಡೆಸಿದ್ದು ಆ ಪೈಕಿ 66 ಪಂದ್ಯಗಳನ್ನು ಆರ್ಸಿಬಿ ಗೆದ್ದು ಬೀಗಿದೆ. ಜೊತೆಗೆ ಕೊಹ್ಲಿ ನಾಯಕದಡಿಯಲ್ಲೇ ಬೆಂಗಳೂರು 1 ಬಾರಿ ಫೈನಲಿಸ್ಟ್, 3 ಬಾರಿ ಪ್ಲೇ ಆಫ್ ಹಂತ ಪ್ರವೇಶಿಸಿದೆ..a
ಅಭಿಷೇಕ್ ಎಸ್