
ಫೆಬ್ರವರಿ 19ರಂದು ಪ್ರಾರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಆರಂಭವಾಗಿದೆ. ಅದರಲ್ಲೂ ಮುಖ್ಯವಾಗಿ ಕೋಟ್ಯಾಂತರ ಅಭಿಮಾನಿಗಳು ಎದುರು ನೋಡುತ್ತಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಅಂಪೈರ್ಗಳ ನೇಮಕವಾಗಿದೆ. ಫೆಬ್ರವರಿ 23 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಈ ಒಂದು ಬಹುನಿರೀಕ್ಷಿತ ಪಂದ್ಯಕ್ಕೆ ಪಾಲ್ ರಿಫೇಲ್,ರಿಚರ್ಡ್ ಇಲ್ಲಿಂಗ್ ವರ್ತ್ ಆನ್ ಫೀಲ್ಡ್ ಅಂಪೈರ್ಗಳಾಗಿದ್ದಾರೆ.

ಟಿವಿ ಅಂಪೈರ್ಗಳಾಗಿ ಮೈಕೆಲ್ ಗೌಫ್ ಆಯ್ಕೆಯಾಗಿದ್ದಾರೆ. ಭಾರತದ ಇತರೆ ಪಂದ್ಯಗಳಿಗೂ ಐಸಿಸಿ ಅಂಪೈರ್ಗಳನ್ನು ಘೋಷಿಸಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನ ಮತ್ತು ದುಬೈ ಅತಿಥ್ಯದಲ್ಲಿ ನಡೆಯಲಿದ್ದು ಪ್ರಶಸ್ತಿಗಾಗಿ 8 ತಂಡಗಳು ಕಣಕ್ಕಿಳಿಯಲಿವೆ. ಫೆಬ್ರವರಿ 20 ರಂದು ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ದ ಆಡಲಿದೆ.
ಅಭಿಷೇಕ್ ಎಸ್