
ಮಾರ್ಚ್ 22ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ಆರ್ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಕಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಜರುಗಲಿದ್ದು ಆರ್ಸಿಬಿ ಮೊದಲ ಪಂದ್ಯಕ್ಕೆ ತನ್ನ ತಯಾರಿಯನ್ನು ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಸಮತೋಲನದ ಪ್ಲೈಯಿಂಗ್ 11 ಆಡಿಸುವ ಲೆಕ್ಕಚಾರ ಹಾಕಿಕೊಂಡಿದೆ. ಅದರಂತೆ ಆಡುವ 11ರ ಬಳಗದಲ್ಲಿ 4 ಬೌಲರ್ಗಳು, 3 ಅಲೌಂಡರ್ಗಳು ಇರಲಿದ್ದಾರೆ. ಆರಂಭಿಕರಾಗಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, 3ನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಕ್ರೀಸಿಗೆ ಬರಲಿದ್ದು, 4ನೇ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್. 5ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. 6ನೇ ಕ್ರಮಾಂಕದಲ್ಲಿ ಟೀಮ್ ಡೇವಿಡ್, 7ನೇ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ ಆಡುವ ಸಾಧ್ಯತೆ ಹೆಚ್ಚು. ಬೌಲಿಂಗ್ ವಿಚಾರಕ್ಕೆ ಬಂದರೆ ಭುವನೇಶ್ವರ್ ಕುಮಾರ್ ಆರ್ಸಿಬಿ ಬೌಲಿಂಗ್ ವಿಭಾಗವನ್ನು ಮುನ್ನೆಡೆಸಿದ್ದಾರೆ. ಅವರಿಗೆ ಯಶ್ ದಯಾಳ್, ಜೋಶ್ ಹ್ಯಾಝಲ್ವುಡ್ ಸಾಥ್ ನೀಡಲಿದ್ದು, ಸ್ಪಿನ್ನರ್ ಆಗಿ ಸುಯಶ್ ಶರ್ಮಾಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಇನ್ನು ರಾಸಿಖ್ ಸಲಾಂ, ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.

ಅಭಿಷೇಕ್.ಎಸ್