Ashwaveega News 24×7 ಏಪ್ರಿಲ್ 5 – 2026 : ಬೆಂಗಳೂರು : Bengaluru ನಗರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಬಹುನಿರೀಕ್ಷಿತ ಪಂದ್ಯಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಪಂದ್ಯಕ್ಕೆ ಮುನ್ನ ಭದ್ರತಾ ವ್ಯವಸ್ಥೆಗಳ ಪರಿಶೀಲನೆಯನ್ನು ಬೆಂಗಳೂರು ಪೊಲೀಸ್ ಆಯುಕ್ತರು ನಡೆಸಿದ್ದಾರೆ .
M. Chinnaswamy Stadium ಸಂಪೂರ್ಣ ಸಜ್ಜಾಗಿದ್ದು, ಕ್ರೀಡಾಂಗಣದ ಸುತ್ತಮುತ್ತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಟೇಡಿಯಂ ಒಳಗೂ ಹಾಗೂ ಹೊರಗೂ ಎಲ್ಲಾ ರೀತಿಯ ಸುರಕ್ಷತಾ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ.
ಪಂದ್ಯ ವೀಕ್ಷಣೆಗೆ ಟಿಕೆಟ್ ಹೊಂದಿರುವವರು ಮಾತ್ರ ಕ್ರೀಡಾಂಗಣಕ್ಕೆ ಬರಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ. ಅನಾವಶ್ಯಕವಾಗಿ ಸ್ಟೇಡಿಯಂ ಸುತ್ತ ಸಂಚಾರ ಮಾಡಬಾರದು ಎಂದು ಆಯುಕ್ತರು ಮನವಿ ಮಾಡಿದ್ದಾರೆ.
ಕಳೆದ ಪಂದ್ಯದಲ್ಲಿ ಮೆಟ್ರೋ ಸೇವೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗಿದ್ದು, ಸುಮಾರು 15 ಸಾವಿರ ಜನರು ಮೆಟ್ರೋ ಮೂಲಕ ಬಂದಿದ್ದರು. ಪಂದ್ಯ ಬಳಿಕ ಸುಮಾರು 22 ಸಾವಿರ ಪ್ರೇಕ್ಷಕರು ಸುರಕ್ಷಿತವಾಗಿ ವಾಪಸ್ ತೆರಳಿದ್ದರು. ಈ ವ್ಯವಸ್ಥೆ ಯಶಸ್ವಿಯಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
RCB-CSK ಪಂದ್ಯಕ್ಕೆ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ನಿಯಮಗಳನ್ನು ಪಾಲಿಸಿ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
