ಬಳ್ಳಾರಿ : ಕೋವಿಡ್ ಹಗರಣ ಸಂಬಂಧ ಪ್ರಾಸಿಕ್ಯೂಷನ್ಗೆ ಶಿಫಾರಸು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವ ಬಗ್ಗೆ ಆರೋಪಿತ ಸ್ಥಾನದಲ್ಲಿರುವ ಶ್ರೀರಾಮುಲು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇಂದು ವರದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು ಈ ಹಿಂದೆ ಕಲಬುರಗಿಯಿಂದ ಕರೋನಾ ರಾಜ್ಯದ ತುಂಬೆಲ್ಲಾ ಹರಡಿತ್ತು. ಆಗ ನಾನು ಆರೋಗ್ಯ ಸಚಿವ ಇದ್ದೆ. ಟಾಸ್ಕ್ ಪೋರ್ಸ್ ಮಾಡಿಕೊಂಡು, ಕೆಲಸ ಮಾಡಿದ್ದೇವೆ . ರಾಜ್ಯ ಸರ್ಕಾರ ಮಾಡ್ತಿರೋ ಭ್ರಷ್ಟಾಚಾರ ಮುಚ್ಚಾಕೋಕೆ, ನನ್ನ ಮೇಲೆ, ಯಡಿಯೂರಪ್ಪ ಮೇಲೆ ಪ್ರಾಶಿಕ್ಯೂಷನ್ ಗೆ ಕೊಡಲು ಹೊರಟಿದ್ದಾರೆ. ಗೊಡ್ಡು ಬೆದರಿಕೆಗೆ ನಾವು ಹೆದರೋಲ್ಲಾ. ದೇವರ ಜತೆ ಅಂದು ನಾವು ಕೆಲಸ ಮಾಡಿದ್ದೇವೆ. ವರು ಏನು, ಮಾಡ್ತಾರೋ, ಮಾಡಲಿ. ನಾವು ಗೊಡ್ಡ ಬೆದರಿಕೆಗೆ ಹೆದರೋಲ್ಲಾ . ವಾಲ್ಮೀಕಿ ಹಗರಣ ಯಾಕೆ ಆಯ್ತು, ಅಂತ ನಾವು ಜನರ ಬಳಿ ಹೇಳ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೆ ವೇಳೆ ಇದನ್ನೆಲ್ಲಾ ಮುಚ್ಚಿಹಾಕೋಕೆ ಇದೆಲ್ಲಾ. ಒಂದೂವರೆ ವರ್ಷಗಳ ಕಾಲ ಏನು ಮಾಡ್ತಿದ್ರಿ ನೀವು-? ಒಂದೇ, ಒಂದು ಆರೋಪ ಸಾಬಿತು ಮಾಡಲಿ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೆನೆ. ದ್ವೇಷದ ರಾಜಕಾರಣ ಇದು ಒಳ್ಳೆಯದಲ್ಲಾ. ರಿಜನಲ್ ಪಾರ್ಟಿ ಗಳು ದ್ವೇಷದ ರಾಜಕಾರಣ ಮಾಡ್ತವೆ, ಆದ್ರೆ ನ್ಯಾಷನಲ್ ಪಾರ್ಟಿ ಇದೇ ಮೊದಲ ಬಾರಿಗೆ ಮಾಡ್ತಿದೆ . ನಾವು ಕಾನೂನು ಹೋರಾಟ ಮಾಡ್ತೆವೆ ಎಂದು ಶ್ರೀರಾಮುಲು ಹೇಳಿದ್ದಾರೆ.