ಅದು ಅಭಿಮಾನಿಗಳ ನೆಚ್ಚಿನ ತಂಡ ಕಪ್ ಗೆಲ್ಲದಿದ್ದರೂ ಅಭಿಮಾನಿಗಳಿಗೆ ಕೊರತೆಯೇನಿಲ್ಲ,ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಬೆಳೆಯುತ್ತಲೇ ಇದೆ. ಅಲ್ಲದೇ ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೋಸ್ಟ್ ರಾಯಲಿಟಿ ಫಾನ್ಸ್ನ ನೆಚ್ಚಿನ ತಂಡ. ಅದುವೇ 2008ರಲ್ಲಿ ಹುಟ್ಟಿಕೊಂಡ ಆರ್ಸಿಬಿ. ಒಂದು ಬಾರಿ ಕೂಡ ಕಪ್ ಗೆಲ್ಲದಿದ್ದರೂ. ಅಭಿಮಾನಿಗಳು ಬೆಂಬಲ ನೀಡುವುದನ್ನು ಮಾತ್ರ ನಿಲ್ಲಿಸಿಲ್ಲ. ಅದಕ್ಕಾಗಿಯೇ ವಿಶ್ವದಲ್ಲೇ ಆರ್ಸಿಬಿಗೆ ಅಷ್ಟೊಂದು ಕ್ರೇಜ್ ಸೃಷ್ಟಿಯಾಗಿರುವುದು. ಟೂರ್ನಿಗಾಗಿ ಆರ್ಸಿಬಿ ತಂಡ ಚಿನ್ನಸ್ವಾಮಿಯಲ್ಲಿ ಅನ್ಬಾಕ್ಸ್ ಇವೆಂಟ್ ಅನ್ನು ಅಯೋಜನೆ ಮಾಡಿತ್ತು. ಬಿಸಿಲು ಎಂದು ಲೆಕ್ಕಿಸದೇ ಆರ್ಸಿಬಿಗೆ ಬೆಂಬಲು ನೀಡಲು ಸಂಜೆ 4 ಗಂಟೆಯಿಂದಲೇ ಕ್ರೀಡಾಂಗಣದಲ್ಲಿ ಜಮಾಯಿಸಿದರು. ಟಿಮಿ ಟ್ರಂಪೆಟ್,ಸಾವರಿ ಬ್ಯಾಂಡ್, ಬೆಸ್ಟ್ ಕೆಪ್ಪ್ ಸೀಕ್ರೆಟ್ ಬ್ಯಾಂಡ್, ಅಲ್ ಓಕೆ ರ್ಯಾಪರ್ ಹಾಗೂ ಹನುಮಾನ್ಕೈಂಡ್ ಸಂಗೀತ ಕಾರ್ಯಕ್ರಮಗಳು ಅಭಿಮಾನಿಗಳನ್ನು ರಂಜಿಸಿತ್ತು. ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್, ಶಂಕರ್ ನಾಗ್ ಹಾಡುಗಳು ಮೊಳಗಿದವು. ಇದೇ ಅಪ್ಪು ಸಾಂಗ್ ಪ್ಲೇ ಆದಾಗ ಎಲ್ಲರ ಕಣ್ಣುಗಳು ತೇವವಾದವು. ಆಟಗಾರರೆಲ್ಲರೂ ನೆರೆದಿದ್ದ ಅಭಿಮಾನಿಗಳ ನಡುವೆ ಅಭ್ಯಾಸ ನಡೆಸಿದರು.

ಅಪ್ಪು ಬರ್ತ್ ಡೇ ದಿನದಂದು ಆರ್ಸಿಬಿ ಅನ್ ಬಾಕ್ಸ್ನ ಇವೆಂಟ್
ಕಳೆದೆರಡು ಮೂರು ಸೀಸನ್ಗಳಿಂದ ಆರ್ಸಿಬಿ ಫ್ರಾಂಚೈಸಿ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಅನ್ ಬಾಕ್ಸ್ ಇವೆಂಟ್ ಅನ್ನು ಹಮ್ಮಿಕೊಳ್ಳುವ ವಾಡಿಕೆ ಮಾಡಿಕೊಂಡಿದೆ. ಈ ಬಾರಿ ಕನ್ನಡಿಗೆ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅವರ ಬರ್ತ್ ಡೇ ದಿನದಂದು ಆರ್ಸಿಬಿ ಅನ್ಬಾಕ್ಸ್ ಇವೆಂಟ್ ಮಾಡಿರುವುದು ವಿಶೇಷ. ಈ ಹಿಂದೆ ಆರ್ಸಿಬಿ ತಂಡಕ್ಕೆ ಪುನೀತ್ ರಾಜ್ಕುಮಾರ್ ಅವರು ತಂಡದ ರಾಯಭಾರಿ ಆಗಿದ್ದರು. ಅವರಿಲ್ಲದ್ದ ಇವೆಂಟ್ನಲ್ಲಿ ಅವರ ಸಿನಿಮಾ ಹಾಡುಗಳು ಹಾಡಿದಾಗ ಅಭಿಮಾನಿಗಳು ಎಮೋಷನಲ್ ಆದರು. ಅಪ್ಪು ದಿನದಂದೇ ಅನ್ ಬಾಕ್ಸ್ ಇವೆಂಟ್ ಆಗಿರುವುದರಿಂದ ಈ ಬಾರಿ ಬೆಂಗಳೂರು ಟ್ರೋಫಿ ಗೆಲ್ಲಲಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಆಸೆ ಈ ಬಾರಿಯಾದರೂ ಈಡೇರುತ್ತಾ ಎಂಬುದು ಕಾದು ನೋಡಬೇಕು.
ಅಭಿಷೇಕ್ ಎಸ್