
ಇತ್ತೀಚೆಗೆ ನಡೆದ 3ನೇ ಆವೃತ್ತಿಯ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೀಡಲಾಗಿದ್ದ 150 ರನ್ಗಳ ಸಾಧಾರ ಗುರಿಯನ್ನು ಸಮರ್ಥವಾಗಿ ತಡೆದ ತಂಡದ ಬೌಲರ್ಗಳನ್ನು ಹರ್ಮನ್ ಪ್ರೀತ್ ಹೊಗಳಿದ್ದಾರೆ. ಫೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ (66) ರನ್ ಗಳಿಸಿದ್ದರು. ಅವರ ಅರ್ಧಶತಕದಿಂದ ಮುಂಬೈ 20 ಓವರ್ಗಳಲ್ಲಿ 149 ರನ್ ಗಳಿಸಿತ್ತು. ನಂತರ ಡೆಲ್ಲಿ ತಂಡವನ್ನು 141 ರನ್ಗಳಿಗೆ ಕಟ್ಟಿ ಹಾಕಿ ಮಹಿಳಾ ಪ್ರೀಯರ್ ಲೀಗ್ನಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಲನಮ್ಮ ಯೋಜನೆಯ ಪ್ರಕಾರ ರನ್ ಗಳಿಸಲು ಸಾಧ್ಯವಾಗಲಿಲ್ಲ. 149 ರನ್ ಸ್ಪರ್ಧಾತ್ಮಕ ಮೊತ್ತವಾಗಿರಲಿಲ್ಲ. ಆದರೆ ನಮ್ಮ ಬೌಲರ್ಗಳು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ದಾಳಿ ನಡೆಸಿದರು ಅದರ ಸಂಪೂರ್ಣ ಶ್ರೇಯಸ್ಸು ಬೌಲರ್ಗಳಿಗೆ ಹೋಗಬೇಕೆಂದು ಹೇಳಿದ್ದಾರೆ. ಪವರ್ ಪ್ಲೇನಲ್ಲಿ ಶಬ್ನಿಂ ಮತ್ತು ಬ್ರಂಟ್ ಅವರು ಪ್ರಮುಖ ಎರಡು ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಆರಂಭದಲ್ಲೇ ಪೆಟ್ಟು ನೀಡಿದರು. ತಂಡದ ಪ್ರತಿಯೊಬ್ಬ ಬೌಲರ್ಗಳ ಪ್ರದರ್ಶನ ಬಗ್ಗೆ ನಿಜವಾಗಿಯೂ ಸಂತೋಷವಾಗಿದೆ ಎಂದು ನಾಯಕಿ ಹರ್ಮನ್ಪ್ರೀತ್ ಕೌರ್ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ಡೆಲ್ಲಿ ತಂಡವನ್ನು 8 ರನ್ಗಳಿಂದ ಸೋಲಿಸಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು..

ಅಭಿಷೇಕ್ ಎಸ್