ಹಾವೇರಿ:
ಹಾವೇರಿ ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಬಂಕಾಪುರ ಸುತ್ತಮುತ್ತ ಹಲವೆಡೆಗಳು ಕಟಾವಿಗೆ ಬಂದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಈ ಮಳೆಯಿಂದ ಸೋಯಾಬಿನ್ ಸೇರಿದಂತೆ ಹಲವಾರು ಬೆಳೆಗಳು ನೀರು ನಿಂತು ಕೊಳೆತು ಹೋಗಿದ್ದು, ರೈತರಿಗೆ ಭಾರಿ ನಿರಾಶೆ ಮೂಡಿಸಿದೆ.
ನನ್ನನೆ ಕಟಾವು ಮಾಡಬೇಕಾಗಿದ್ದ ಬೆಳೆಗಳು ಮಳೆಯಿಂದ ಸಂಪೂರ್ಣ ನಾಶಗೊಂಡಿದ್ದು, ಸಾವಿರಾರು ರೂಪಾಯಿ ಮೊತ್ತದ ಖರ್ಚು ಮಾಡಿದ ರೈತರಿಗೆ ಭೂಮಿ ಪಾಳಾಗಿದೆ. ರೈತರು ಮಾರುಕಟ್ಟೆಗೆ ಪಸರಿಸಲು ನಿರೀಕ್ಷೆ ಇಟ್ಟಿದ್ದ ಬೆಳೆಗಳು, ಈಗ ಸಂಪೂರ್ಣವಾಗಿ ಹಾಳಾಗಿವೆ.
ನಿರಂತರ ಮಳೆ ಈ ಬಾರಿ ರೈತರ ಪಾಲಿಗೆ ಆರ್ಥಿಕ ನಷ್ಟವನ್ನು ತಂದಿರುವುದರಿಂದ, ಜಿಲ್ಲೆಯಲ್ಲಿ ರೈತರು ಆತಂಕದಲ್ಲಿದ್ದಾರೆ.