
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ದ ನಡೆದ 2ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 90 ಎಸೆತಗಳಿಂದ 119 ರನ್ ಗಳಿಸಿದ್ದಾರೆ ಇವರ ಇನ್ನಿಂಗ್ಸ್ನಲ್ಲಿ 12 ಪೋರ್, 7 ಸಿಕ್ಸರ್ ಸೇರಿಕೊಂಡಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರೋಹಿತ್ ಶರ್ಮಾ ಶತಕ ಗಳಿಸಿ 475 ದಿನಗಳೇ ಆಗಿತ್ತು. ಇತ್ತೀಚೆಗೆ ಅವರ ಬ್ಯಾಟ್ ಸದ್ದು ಮಾಡುತ್ತಿರಲಿಲ್ಲ. ಅನೇಕ ಮಾಜಿ ಕ್ರಿಕೆಟಿಗರು ರೋಹಿತ್ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡಿದ್ದರು.

ರೋಹಿತ್ ಆಡುತ್ತಿದ್ದ ಶೈಲಿ ನೋಡಿ ಬಹಳ ಮಂದಿ ಅವರ ಕ್ರಿಕಿಟ್ ಕೇರಿಯರ್ ಕೊನೆಗೊಳ್ಳಲಿದೆ ಎಂದೇ ಹೇಳುತ್ತಿದ್ದರು. ಆದರೆ ಇಂಗ್ಲೆಂಡ್ ವಿರುದ್ದ ರೋಹಿತ್ ಶರ್ಮಾ ಶತಕ ಸಿಡಿಸುವುದರ ಮೂಲಕ ಎಲ್ಲ ಟೀಕಾಗಾರರಿಗೆ ಬ್ಯಾಟ್ನಿಂದಲೇ ಉತ್ತರ ನೀಡಿದ್ದಾರೆ. ಅಲ್ಲದೇ ಮುಂಬರುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಬ್ಯಾಟಿಂಗ್ ಲಯ ಕಂಡು ಕೊಂಡಿರುವುದು ಅವರ ಫ್ಯಾನ್ಸ್ಗೆ ಸಾಕಷ್ಟು ಖುಷಿ ಕೊಟ್ಟಿದೆ .

ಅಭಿಷೇಕ್ ಎಸ್