
Ashwaveega News 24×7 ಅ. 02: ಕರಿಯ ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ (38) ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಕೆಲ ದಿನಗಳಿಂದ ಜಾಂಡಿಸ್ನಿಂದ ಬಳಲುತ್ತಿದ್ದರು. ಇದು ತೀವ್ರಗೊಂಡ ಬೆನ್ನಲ್ಲೇ ಸಂತೋಷ್ ಅವರನ್ನ ಕುಮಾರಸ್ವಾಮಿ ಲೇಜೌಟ್ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜಾಂಡಿಸ್ ಹೆಚ್ಚಾಗಿ ಅವರು ಕೋಮಾಗೆ ಜಾರಿದ್ದು, ಸಂತೋಷ್ ಬಾಲರಾಜ್ ಅವರಿಗೆ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
34 ವರ್ಷದ ನಟ ಸಂತೋಷ್ ಬಾಲರಾಜ್ ಅವರು ಜಾಂಡಿಸ್ನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಕೋಮಾದಲ್ಲಿದ್ದಾರೆ. ಜಾಂಡಿಸ್ ದೇಹದಾದ್ಯಂತ ಹರಡಿರುವ ಕಾರಣ, ಅವರ ಸ್ಥಿತಿ ಗಂಭೀರವಾಗಿದೆ. ಸಂತೋಷ್ ಬಾಲರಾಜ್ ಅವರು ತಾಯಿಯೊಂದಿಗೆ ವಾಸಿಸುತ್ತಿದ್ದು, ಅವರಿಗೆ ಇನ್ನೂ ಮದುವೆಯಾಗಿಲ್ಲ.
ಸಂತೋಷ್ ಬಾಲರಾಜ್ ಕೆಲ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ʻಗಣಪʼ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು. ಈ ಚಿತ್ರದಲ್ಲಿ ಅವರ ಅಭಿನಯವು ಕನ್ನಡ ಸಿನಿ ಪ್ರೇಕ್ಷಕರಿಗೆ ಒಂದು ಗಮನಾರ್ಹ ಪಾತ್ರವಾಗಿದೆ. ಕನ್ನಡದ ಖ್ಯಾತ ನಿರ್ಮಾಪಕ ಆನೇಕಲ್ ಬಾಲರಾಜ್ರ ಪುತ್ರನೇ ಸಂತೋಷ್ ಬಾಲರಾಜ್. ಆನೇಕಲ್ ಬಾಲರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʻಕರಿಯʼ ಸಿನಿಮಾವನ್ನ ಆನೇಕಲ್ ಬಾಲರಾಜ್ ನಿರ್ಮಿಸಿದರು.
ಇನ್ನು ತಂಗಿ ಹಾಗೂ ತಾಯಿಯ ಜೊತೆ ಸಂತೋಷ್ ವಾಸವಾಗಿದ್ದರು. ತಾಯಿ ಕೂಡ ಅನಾರೋಗ್ಯದಿಂದ ಓಡಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿದು ಬಂದಿದೆ.