ಬೆಳಗಾವಿ: ಖಾಸಗಿ ಶಾಲಾ ವಾಹನ ಚಾಲಕನಿಂದ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಬೆಳಗಾವಿಯ ವಡಗಾಂವ ನಗರದಲ್ಲಿ ನಡೆದಿದ್ದು, ಪಾಟೀಲ ಗಲ್ಲಿಯ ನಿವಾಸಿ ಕೃಷ್ಣಾ ರಾಜಗೋಳಕರ (50) ಆರೋಪಿಯಾಗಿ ಗುರುತಿಸಲಾಗಿದೆ.
ಬಾಲಕಿಯು ಹಿಂದವಾಡಿಯ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಗೆ ಕರೆದೊಯ್ಯುವ ವಾಹನ ಚಾಲಕನೇ ಈ ಕೃತ್ಯವೆಸಗಿದ್ದಾನೆ. ಆರೋಪಿ, ಬಾಲಕಿಯನ್ನು ಶಾಲೆಯ ಶೌಚಾಲಯಕ್ಕೆ ಕರೆದೊಯ್ಯ್ದು ಅವಳ ಗುಪ್ತಾಂಗಗಳನ್ನು ಸ್ಪರ್ಶಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ಘಟನೆ ಬಳಿಕ, ಬಾಲಕಿ ಶಾಲಾ ವಾಹನದಲ್ಲಿ ಹೋಗುವುದನ್ನು ನಿಲ್ಲಿಸಿದ್ದಳು ಮತ್ತು ಭಯದಿಂದ ಇತರರೊಂದಿಗೆ ಶೋಚನೀಯವಾಗಿ ವರ್ತಿಸುತ್ತಿದ್ದಳು. ಬಾಲಕಿಯ ತಾಯಿ ಈ ವಿಷಯವನ್ನು ತಿಳಿದ ಬಳಿಕ, ತಕ್ಷಣವೇ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.