ಬೆಂಗಳೂರು : ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು, ಹತ್ಯೆ ಆರೋಪಿ ದರ್ಶನ್ಗೆ ಸರ್ಜರಿ ಮಾಡುವುದು ಬಹುತೇಕ ಖಚಿತವಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಈಗಾಗಲೇ ಕೆಂಗೇರಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದರ್ಶನ್ಗೆ ಬೆನ್ನುನೋವು ಉಲ್ಪಣವಾಗಿದೆ. ಸರ್ಜರಿಯ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇನ್ನೂ ದರ್ಶನ್ ಆಪರೇಷನ್ ಮಾಡಿಸಿಕೊಂಡರೆ ಸಿನಿಮಾ ಮತ್ತು ಸ್ಟಂಟ್ ಚಿತ್ರೀಕರಣದ ವೇಳೆಯಲ್ಲಿ ತೊಂದರೆಯಾಗಬಹುದು ಎಂಬ ಭಯದಿಂದ ಕೇವಲ ಫಿಸಿಯೋಥೆರಪಿ ಮಾಡುವಂತೆ ಕೋರಿದ್ದರು. ಹೀಗಾಗಿ ದರ್ಶನ್ಗೆ ಚಿಕಿತ್ಸೆ ನೀಡುತ್ತಿರುವ ಡಾ.ನವೀನ್ ಅಪ್ಪಾಜಿ ಗೌಡ ನೇತೃತ್ವದ ವೈದ್ಯರ ತಂಡ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಜೊತೆಗೆ ಚರ್ಚೆ ನಡೆಸಿದ್ದು, ಈ ವೇಳೆ ಪಿಜಿಯೋಥೆರಪಿ ಜೊತೆಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಕೇವಲ ಪಿಜಿಯೋಥೆರಪಿಯಿಂದ ಬೆನ್ನು ನೋವು ಸಂಪೂರ್ಣ ಗುಣಮುಖವಾಗಲು ಸಾಧ್ಯವಿಲ್ಲ ಎಂದಿರುವ ವೈದ್ಯರು ಶೀಘ್ರ ಬೆನ್ನುನೋವಿನ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಔಚಿತ್ಯದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ಸೂಚಿಸಿದ್ದಾರೆ.
ವೈದ್ಯಕೀಯ ಚಿಕಿತ್ಸೆಗಾಗಿ ಹೈಕೋರ್ಟ್ ದರ್ಶನ್ ಗೆ ಆರು ವಾರಗಳ ಜಾಮೀನು ನೀಡಿತ್ತು. ಈಗಾಗಲೇ ಎರಡು ವಾರಗಳು ಕಳೆದು ಹೋಗಿವೆ.. ದರ್ಶನ್ ಗೆ ಈಗಾಗಲೇ ಸ್ಕ್ಯಾನಿಂಗ್ , ಇಸಿಜಿ, ಟ್ರೆಡ್ ಮಿಲ್, ಲಿವರ್ ಫಂಕ್ಷನ್, ರೀನಲ್ ಫಂಕ್ಷನ್, ಯೂರಿನ್ ಟೆಸ್ಟ್, ಬ್ರಡ್ ಪ್ರೆಷರ್ ಟೆಸ್ಟ್, ಶುಗರ್ ಟೆಸ್ಟ್ ಸೇರಿದಂತೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆದಿದ್ದು, ವರದಿಗಳು ವೈದ್ಯರ ಬಳಿ ಸೇರಿವೆ.. ಇದೆಲ್ಲವನ್ನೂ ಆಧರಿಸಿ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದು, ದರ್ಶನ್ ಕುಟುಂಬ ಸಹ ಇದಕ್ಕೆ ಒಪ್ಪಿಕೊಂಡಿದೆ.. ಈಗಾಗಲೇ ದರ್ಶನ್ ಶಸ್ತ್ರ ಚಿಕಿತ್ಸೆ ವೈದ್ಯರು ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಸರ್ಜರಿ ನಡೆಯಲಿದೆ.