
shabarish file complaint against nandakishore in film chamber
ಕಿಚ್ಚ ಸುದೀಪ್ ಹೆಸರು ಹೇಳಿಕೊಂಡು ವಂಚಿಸಿದ ನಿರ್ದೇಶಕ ನಂದಕಿಶೋರ್ ವಿರುದ್ಧ ಇಂದು ನಟ ಶಬರೀಶ್ ಶೆಟ್ಟಿ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡೋದಾಗಿ 22 ಲಕ್ಷ ರೂ. ಹಣ ವಂಚಿಸಿ ಸಿನಿಮಾವನ್ನೂ ಮಾಡದೇ, ಅವಕಾಶವನ್ನೂ ಕೊಡದೆ ಖ್ಯಾತ ನಿರ್ದೇಶಕ ನಂದಕಿಶೋರ್ ವಂಚಿಸಿದ್ದಾರೆ ಎಂದು ಇತ್ತೀಚೆಗೆ ನಟ ಶಬರೀಶ್ ಶೆಟ್ಟಿ ಆರೋಪ ಮಾಡಿದ್ದರು.
ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಂದಕಿಶೋರ್ ವಿರುದ್ಧ ದೂರು ನೀಡಿದ್ದಾರೆ. ನಟ ಶಬರೀಶ್ ಜಿಮ್ನಲ್ಲಿ ನಿರ್ದೇಶಕ ನಂದಕೀಶೋರ್ ಅವರನ್ನು ಭೇಟಿಯಾದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಬಳಿಕ ಹಂತಹಂತವಾಗಿ ನಂದಕಿಶೋರ್ 22 ಲಕ್ಷ ರೂ. ವರೆಗೆ ಹಣ ಪಡೆದಿದ್ದಾರೆ. ಈಗ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ.
ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್ನ ಆಟಗಾರನೂ ಆಗಿದ್ದ ಶಬರೀಶ್ ನಂದಕಿಶೋರ್ ಮಧ್ಯಸ್ಥಿಕೆಯಲ್ಲಿ ಕಿಚ್ಚ ಸುದೀಪ್ರನ್ನು ಭೇಟಿ ಮಾಡಲು ಆಸೆ ಪಟ್ಟಿದ್ದರಂತೆ. ಇನ್ನೂ, ಸುದೀಪ್ ಹೆಸರನ್ನ ಹೇಳಿಕೊಂಡು ವಂಚಿಸಿದ್ದ ಆರೋಪ ಹೊತ್ತಿರುವ ನಂದಕೀಶೋರ್ ಮೇಲೆ ಇದೀಗ ಶಬರೀಶ್ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.