
Axiom 4 Mission pilot, Group Captain Shubhanshu Shukla says, "Namaskar, my dear countrymen! What a ride
ಐತಿಹಾಸಿಕ ಬಾಹ್ಯಾಕಾಶ ಯಾತ್ರೆ ಕೈಗೊಂಡಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತೊಂದು ಸಂದೇಶವನ್ನು ಕಳುಹಿಸಿದ್ದಾರೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ನಭಕ್ಕೆ ಹಾರಿ 24 ಗಂಟೆಗಳ ಬಳಿಕ ಶುಭಾಂಶು ಶುಕ್ಲಾ ವಿಡಿಯೋ ಸಂದೇಶವನ್ನು ಕಳುಹಿಸಿದ್ದು, ಇತರೆ ಗಗನಯಾತ್ರಿಗಳೊಂದಿಗೆ ಅಲ್ಲಿರಲು ರೋಮಾಂಚನಗೊಂಡಿದ್ದೇನೆ ಎಂದಿದ್ದಾರೆ.
ಬಾಹ್ಯಾಕಾಶದಿಂದ ನಮಸ್ಕಾರ, ನನ್ನ ಸಹ ಗಗನಯಾತ್ರಿಗಳೊಂದಿಗೆ ಇಲ್ಲಿರಲು ನನಗೆ ರೋಮಾಂಚನವಾಗುತ್ತಿದೆ. 30 ದಿನಗಳ ಕ್ವಾರಂಟೈನ್ ನಂತರ ನಾನು ಐಎಸ್ಎಸ್ಗೆ ಹೋಗಲು ಬಯಸಿದ್ದೆ. ಇದು ಅದ್ಭುತ ಜರ್ನಿಯಾಗಿತ್ತು ಎಂದಿದ್ದಾರೆ. ಇದರಲ್ಲಿ ಭಾಗವಾಗಿರುವ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದು ವೈಯಕ್ತಿಕ ಸಾಧನೆಯಲ್ಲ. ಕುಟುಂಬ ಮತ್ತು ಸ್ನೇಹಿತರು ನನ್ನ ಜೊತೆ ನಿಂತಿದ್ದಾರೆ ಎಂದು ಶುಕ್ಲಾ ಹೇಳಿದ್ದಾರೆ.
ಈ ವೇಳೆ ಹಂಸ ಗೊಂಬೆಯನ್ನು ಅವರು ತೋರಿಸಿದ್ದು, ಅದು ಬಾಹ್ಯಾಕಾಶದಲ್ಲಿ ಗಿರಗಿರನೇ ತಿರುಗತ್ತಿರುತ್ತಿರುವುದು ಗಮನಸೆಳೆಯಿತು. ಈ ವೇಳೆ ಭಾರತೀಯ ಸಂಸ್ಕೃತಿಯಲ್ಲಿ ಹಂಸವು ಬುದ್ಧಿವಂತಿಕೆಯ ಸಂಕೇತವಾಗಿದೆ ಎಂದ ಶುಭಾಂಶು ಶುಕ್ಲಾ, ನಾನು ಈ ದೃಶ್ಯಗಳನ್ನು ಆನಂದಿಸುತ್ತಿದ್ದೇನೆ ಮತ್ತು ಈ ಪರಿಸರದಲ್ಲಿ ಹೇಗೆ ತಿನ್ನಬೇಕೆಂದು ಕಲಿಯುತ್ತಿದ್ದೇನೆ ಎಂದರು.
ಅದಲ್ಲದೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡುವಾಗ ನಾನು ಭಾರತದ ತ್ರಿವರ್ಣ ಧ್ವಜವನ್ನು ನನ್ನ ಭುಜದ ಮೇಲೆ ಹೊತ್ತುಕೊಂಡಿದ್ದೆ. ಇದು ಈ ಪ್ರಯಾಣದಲ್ಲಿ ನಾನು ಒಬ್ಬಂಟಿಯಲ್ಲ ಮತ್ತು ಎಲ್ಲ ಭಾರತೀಯರು ಅದರ ಭಾಗವಾಗಿದ್ದರು ಎಂದು ಹೇಳಿದ್ದಾರೆ.