ದಿನನಿತ್ಯದ ಜೀವನ ಕೆಲಸದಿಂದ ಬೋರ್ ಆಗಿದ್ಯಾ? ಏನಾದ್ರೂ ಹೊಸದನ್ನು ಮಾಡಬೇಕು ಅಂದುಕೊಂಡಿದ್ದೀರಾ ? ಆದರೆ ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭವನ್ನು ತರಬಹುದಾದ ವ್ಯಾಪಾರ ಐಡಿಯಾ ಇದೆ. ಅದೇ ರಸ್ಕ್ , ಬಿಸ್ಕತ್ತು ತಯಾರಿಕಾ ವ್ಯವಹಾರ. ಇತ್ತೀಚೆಗೆ, ದೇಶಾದ್ಯಂತ ಮತ್ತು ನಗರ ಪ್ರದೇಶಗಳಲ್ಲಿ ರಸ್ಕ್ಗಳ ಬಳಕೆ ಹೆಚ್ಚಾಗಿದೆ. ರಸ್ಕ್ ಬಿಸ್ಕತ್ತು ತಯಾರಿಕಾ ವ್ಯವಹಾರದ ಮಾಹಿತಿ ಈ ಸುದ್ದಿಯಲ್ಲಿ ತಿಳಿಯೋಣ ಬನ್ನಿ.
ರಸ್ಕ್ ಬಿಸ್ಕತ್ಗೆ ಬೇಡಿಕೆ ಚೆನ್ನಾಗಿದೆ. ಅವುಗಳನ್ನು ಹೆಚ್ಚಾಗಿ ಬೆಳಿಗ್ಗೆ ಮತ್ತು ಸಂಜೆಯ ತಿಂಡಿಗಳಾಗಿ ಸೇವಿಸಲಾಗುತ್ತಿದ್ದು, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತವೆ. ಹೆಚ್ಚಿನ ಬೇಡಿಕೆ ಮತ್ತು ಬಳಕೆಯಿಂದಾಗಿ ರಸ್ಕ್ ಬಿಸ್ಕತ್ತು ವ್ಯಾಪಾರವನ್ನು ಪ್ರಾರಂಭಿಸುವುದು ಉತ್ತಮ ವ್ಯಾಪಾರ ಕಲ್ಪನೆ ಎಂದು ಹೇಳಬಹುದು.
ರಸ್ಕ್ ಬಿಸ್ಕತ್ತು ತಯಾರಿಕೆಯ ವ್ಯವಹಾರವನ್ನು ಪ್ರಾರಂಭಿಸಲು ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ. ಸ್ವಂತ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಹೂಡಿಕೆ ಮಾಡಲು ಹಣವಿಲ್ಲದಿದ್ದರೆ ಬ್ಯಾಂಕ್ ಮೂಲಕ ಸಾಲ ಪಡೆಯಬಹುದು. ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಪ್ರಮಾಣದ ಅಥವಾ ದೊಡ್ಡ ಪ್ರಮಾಣದ ರಸ್ಕ್ ಬಿಸ್ಕತ್ತು ತಯಾರಿಕೆಯ ವ್ಯಾಪಾರವನ್ನು ಪ್ರಾರಂಭಿಸಿ ಉತ್ತಮ ಲಾಭವನ್ನು ಗಳಿಸಬಹುದು. ಅವುಗಳನ್ನು ಮನೆಯಲ್ಲಿಯೇ ಕೈಯಿಂದ ತಯಾರಿಸಬಹುದು. ಆದಾಗ್ಯೂ, ದೊಡ್ಡ ಪ್ರಮಾಣದ ಉತ್ಪಾದನೆಗೆ ಸ್ವಯಂಚಾಲಿತ ಯಂತ್ರಗಳು ಬೇಕಾಗುತ್ತವೆ.
ರಸ್ಕ್ ಬಿಸ್ಕತ್ತು ತಯಾರಿಕಾ ವ್ಯವಹಾರವನ್ನು ಪ್ರಾರಂಭಿಸಲು ಮೊದಲ ಹೂಡಿಕೆಯನ್ನು ಸ್ಥಾವರ, ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳನ್ನು ಸ್ಥಾಪಿನೆ ಮಾಡಬೇಕು. ಈ ವ್ಯಾಪಾರಕ್ಕೆ 500 ರಿಂದ 800 ಚದರ ಅಡಿ ಜಾಗದ ಅಗತ್ಯವಿದೆ. ನಿಮ್ಮ ಸ್ವಂತ ಸ್ಥಳವಿಲ್ಲದಿದ್ದರೆ, ನೀವು ಅದನ್ನು ಬಾಡಿಗೆಗೆ ಪಡೆಯಬಹುದು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಪ್ರಕಾರ, ರಸ್ಕ್ ಬಿಸ್ಕೆಟ್ ತಯಾರಿಕಾ ವ್ಯವಹಾರವನ್ನು ಪ್ರಾರಂಭಿಸಲು ಒಟ್ಟು 40 ಲಕ್ಷ ರೂಪಾಯಿ ಬಂಡವಾಳದ ಅಗತ್ಯವಿದೆ.
ಕಟ್ಟಡ ಮತ್ತು ಸಿವಿಲ್ ಕಾಮಗಾರಿಗೆ 4 ಲಕ್ಷ ವೆಚ್ಚ ಬೇಕಾಗುತ್ತೆ. ಸ್ಥಾವರ ಮತ್ತು ಯಂತ್ರೋಪಕರಣಗಳು ರೂ.21.60 ಲಕ್ಷಗಳು, ಪೀಠೋಪಕರಣಗಳು ರೂ.1.30 ಲಕ್ಷಗಳು, ಇತರ ಉಪಕರಣಗಳು ರೂ. 2 ಲಕ್ಷಗಳು ಮತ್ತು ರೂ.11.11 ಲಕ್ಷಗಳ ದುಡಿಯುವ ಬಂಡವಾಳದ ಅಗತ್ಯವಿದೆ. ಯೋಜನೆಯ ಒಟ್ಟು ವೆಚ್ಚ ರೂ.40 ಲಕ್ಷ ಎಂದು KVIC ಖಚಿತಪಡಿಸಿದೆ.
ರಸ್ಕ್ ಬಿಸ್ಕತ್ತು ತಯಾರಿಕಾ ಉದ್ಯಮವನ್ನು ಪ್ರಾರಂಭಿಸಲು ಬಯಸುವವರು ಯೋಜನಾ ವೆಚ್ಚದ 10 ಪ್ರತಿಶತವನ್ನು ಅಂದರೆ 4 ಲಕ್ಷ ರೂ.ಗಳನ್ನು ಸ್ವಂತವಾಗಿ ಹೂಡಿಕೆ ಮಾಡಬೇಕು. 26 ಲಕ್ಷಗಳನ್ನು ಅವಧಿ ಸಾಲದಿಂದ ಸಂಗ್ರಹಿಸಬೇಕು. ಉಳಿದ ರೂ.10 ಲಕ್ಷ ದುಡಿಯುವ ಬಂಡವಾಳ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಒಬ್ಬರು ಬ್ಯಾಂಕ್ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು. ಈ ನೀತಿಯ ಪ್ರಕಾರ, ನಿಮ್ಮ ವ್ಯಾಪಾರ ಪ್ರಾರಂಭವು ರೂ.10 ಲಕ್ಷದವರೆಗೆ ಸಾಲ ಪಡೆಯಬಹುದು. ರಸ್ಕ್ ಬಿಸ್ಕತ್ತುಗಳ ಗುಣಮಟ್ಟ ಮತ್ತು ಪ್ರಮಾಣ ಉತ್ತಮವಾಗಿದ್ದರೆ ಮಾರುಕಟ್ಟೆಯಲ್ಲಿ ಅವುಗಳಿಗೆ ಉತ್ತಮ ಬೇಡಿಕೆ ಇರುತ್ತದೆ.