
srinagara kitty acted veshagalu movie new poster
(ಅಶ್ವವೇಗ) Ashwaveega News 24×7 ಜು.09: ಸ್ಯಾಂಡಲ್ವುಡ್ ಸಂಜು ವೆಡ್ಸ್ ಗೀತಾ ಚಿತ್ರ ಖ್ಯಾತಿಯ ಸಂಜು ಈಗ ಹೊಸ ವೇಷಧರಿಸಿದ್ದಾರೆ. ವೇಷಗಳು ಚಿತ್ರಕ್ಕಾಗಿಯೇ ಇದೀಗ ಜೋಗತಿ ಪಾತ್ರ ಮಾಡಿದ್ದಾರೆ. ಈ ಮೂಲಕ ಮತ್ತೊಂದು ಪ್ರಯೋಗಕ್ಕೂ ಸಜ್ಜಾಗಿದ್ದಾರೆ.
ಗೌಳಿ ಚಿತ್ರದಲ್ಲೂ ಶ್ರೀನಗರ ಕಿಟ್ಟಿ ಅದ್ಭುತವಾಗಿಯೇ ಅಭಿನಯಿಸಿದ್ದರು. ಮಾದೇವ ಚಿತ್ರದಲ್ಲೂ ವಿಲನ್ ಆಗಿಯೇ ಅಬ್ಬರಿಸಿದ್ದರು. ಆದರೆ, ಇದೀಗ ವೇಷಗಳು ಚಿತ್ರದಲ್ಲಿ ಜೋಗತಿ ಬಸಮ್ಮನಾಗಿಯೇ ಅಭಿನಯಿಸುತ್ತಿದ್ದಾರೆ. ರವಿ ಬೆಳಗೆರೆ ಅವರ ಕಥೆಯನ್ನೆ ಈ ಚಿತ್ರ ಆಧರಿಸಿದೆ.
ವೇಷಗಳು ಚಿತ್ರದಲ್ಲಿ ಶ್ರೀನಗರ ಕಿಟ್ಟಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ಜೋಗತಿ ಬಸಮ್ಮನ ಪಾತ್ರದಲ್ಲಿಯೇ ಅಭಿನಯಿಸುತ್ತಿದ್ದಾರೆ. ಈ ಒಂದು ಪಾತ್ರ ರವಿ ಬೆಳೆಗೆರೆ ಅವರು ಬರೆದ ವೇಷಗಳು ಕಥೆಯಲ್ಲಿಯೇ ಇದೆ. ಅದೇ ಕಥೆಯನ್ನ ಆಧರಿಸಿಯೇ ಈ ಚಿತ್ರವನ್ನ ಮಾಡಲಾಗಿದೆ.
ಈ ವೇಷಗಳು ಚಿತ್ರವನ್ನ ಕಿಶನ್ ರಾವ್ ದಳವಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ಅರ್ಪಿಸುತ್ತಿದ್ದಾರೆ. ಗ್ರೀನ್ ಟ್ರೀ ಸ್ಟುಡಿಯೋಸ್ ಈ ಚಿತ್ರವನ್ನ ನಿರ್ಮಿಸುತ್ತಿದೆ. ವಿದ್ವಾನ್ ಕೌಶಿಕ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸೌಜನ್ಯ ದತ್ತರಾಜು ಹಾಗೂ ರಾಜ್ ಗುರು ಈ ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ.
ಶ್ರೀನಗರ ಕಿಟ್ಟಿ ಜುಲೈ-8 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿಶೇಷ ದಿನವೇ ಶ್ರೀನಗರ ಕಿಟ್ಟಿ ಅವರ ಈ ಒಂದು ವೇಷಗಳು ಚಿತ್ರದ ಜೋಗತಿ ಬಸಮ್ಮ ಪಾತ್ರದ ಪೋಸ್ಟರ್ ರಿಲೀಸ್ ಆಗಿದೆ.