
ಐಪಿಎಲ್ 2025ರ ಟೂರ್ನಿಗೆ ಎರಡೇ ದಿನ ಬಾಕಿ. ಮಾರ್ಚ್ 22ರಿಂದ- ಮೇ 25ರವರೆಗೆ ಈ ಕ್ರಿಕೆಟ್ ಹಬ್ಬ ಜರುಗಲಿದೆ. ತಂಡದ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯವನ್ನು 5 ಬಾರಿಯ ಚಾಂಪಿಯನ್ ಆಗಿರುವ ಸಿಎಸ್ಕೆ ವಿರುದ್ದ ತನ್ನ ಅಭಿಯಾನವನ್ನು ಪ್ರಾರಂಭ ಮಾಡಲಿದೆ. ಮಾರ್ಚ್ 23 ಭಾನುವಾರ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನ್ನಾಗಿ ಹಾರ್ದಿಕ್ ಪಾಂಡ್ಯದ ಬದಲಿಗೆ ಸೂರ್ಯಕುಮಾರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಕಳದೆ ವರ್ಷ ಟೂರ್ನಿಯಲ್ಲಿ ಮುಂಬೈ ತಂಡವು ನಿಗದಿತ ವೇಳೆಯೊಳಗೆ ಓವರ್ಗಳನ್ನು ಪೂರೈಸದ ನಿಯಮವನ್ನು 3 ಬಾರಿಗೆ ಉಲ್ಲಂಘಸಿತ್ತು. ಅದರಿಂದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಒಂದು ಪಂದ್ಯದ ಅಮಾನತು ವಿಧಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಮುಂಬೈ ತಂಡ ಲೀಗ್ ಹಂತದಲ್ಲೇ ತಂಡ ಹೊರ ಬಿದ್ದಿತ್ತು. ಆ ಒಂದು ಶಿಕ್ಷೆಯನ್ನು ಈಗ ಜಾರಿ ಮಾಡಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಅಭಿಷೇಕ್.ಎಸ್