
Actress Tanushree Dutta
Ashwaveega News 24×7 ಜು. 23: ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ದ ಮೀಟು ಆರೋಪ ಮಾಡಿ ಅತೀ ದೊಡ್ಡ ಚಳುವಳಿ ಆರಂಭಿಸಿದ ನಟಿ ತನುಶ್ರಿ ದತ್ತಾ ಇದೀಗ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ವಿಡಿಯೋ ಮೂಲಕ ಯಾರಾದರೂ ಸಹಾಯ ಮಾಡಿ ಎಂದು ಕಣ್ಣೀರಿಟ್ಟಿದ್ದಾರೆ.
ನನ್ನ ಮನೆಯಲ್ಲಿ ನನಗೆ ಕಿರುಕುಳ ನೀಡಲಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ಇತ್ತ ನನಗೆ ಕೆಲಸವೂ ಇಲ್ಲ, ಕೆಲಸ ಮಾಡಲು ಆಗತ್ತಿಲ್ಲ. ನನ್ನ ಆರೋಗ್ಯವೂ ಕೆಟ್ಟಿದೆ. ನನಗ ಎಲ್ಲವೂ ಸಾಕಾಗಿದೆ ಎಂದು ತನುಶ್ರಿ ದತ್ತಾ ಕಣ್ಣೀರಿಟ್ಟಿದ್ದಾರೆ.
ತನುಶ್ರಿ ದತ್ತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ನೋವು ಹಂಚಿಕೊಳ್ಳುತ್ತಾ ತನುಶ್ರಿ ದತ್ತಾ ಕಣ್ಣೀರಿಟ್ಟಿದ್ದಾರೆ. 2018ರಿಂದ ನನಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ.
ಮೀಟು ಬಳಿಕ ನಾನು ಪ್ರತಿ ದಿನ ಚಿತ್ರಹಿಂಸೆ ಅನುಭವಿಸುತ್ತಿದ್ದೇನೆ. ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯವಿಟ್ಟು ನನಗೆ ಸಹಾಯ ಮಾಡಿ ಎಂದು ತನುಶ್ರಿ ದತ್ತಾ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ತಾವು ಪೊಲೀಸರಿಗೆ ಕರೆ ಮಾಡಿರುವುದಾಗಿ ಹೇಳಿದ್ದಾರೆ.
ನನ್ನ ಮನೆಯಲ್ಲೇ ನನಗೆ ನೆಮ್ಮದಿ ಇಲ್ಲ. ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ನೋವು ಅನುಭವಿಸುತ್ತಿದ್ದೇನೆ.ನೋವು ತಾಳಲಾರದೆ ನಾನು ಪೊಲೀಸರಿಗೆ ಕರೆ ಮಾಡಿದ್ದೆ. ಪೊಲೀಸರು ಆಗಮಿಸಿ ವಿಚಾರಿಸಿದ್ದಾನೆ.
ನಾಳೆ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾನೆ. ನನ್ನ ಆರೋಗ್ಯ ಸರಿಯಿಲ್ಲ. ಆರೋಗ್ಯ ಹದಗೆಟ್ಟಿರುವ ಕಾರಣ ನಾಳೆ ಅಥವಾ ನಾಡಿದ್ದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತೇನೆ. ಕಳೆದ ನಾಲ್ಕೈದು ವರ್ಷಗಳಿಂದ ನನಗೆ ಕೊಟ್ಟಿರು ಹಿಂಸೆ ಅಷ್ಟಿಟ್ಟಲ್ಲ ಎಂದು ತನುಶ್ರಿ ದತ್ತಾ ಕಣ್ಣೀರಿಡುತ್ತಾ ಹೇಳಿದ್ದಾರೆ.