
Tennis Player Radhika Yadav Shot Dead By Father
(ಅಶ್ವವೇಗ) Ashwaveega News 24×7 ಜು.11: ಹೆತ್ತ ತಂದೆಯೇ 25 ವರ್ಷದ ಮಗಳನ್ನು ಗುಂಡಿಕ್ಕಿ ಜೀವ ತೆಗೆದ ಘಟನೆ ಹರಿಯಾಣದ ಗುರುಗ್ರಾಮ್ ಸೆಕ್ಟರ್ 75 ರಲ್ಲಿ ನಡೆದಿದೆ. ರಾಧಿಕ ಯಾದವ್, ತಂದೆಯಿಂದಲೇ ಜೀವ ಕಳೆದುಕೊಂಡ ಹೆಣ್ಮಗಳು. ಈಕೆ ನ್ಯಾಷನಲ್ ಲೇವೆಲ್ನ ಟೆನ್ನಿಸ್ ಆಟಗಾರ್ತಿ ಆಗಿದ್ದರು.
ದೀಪಕ್ ಯಾದವ್ ಮಗಳ ಜೀವ ತೆಗೆದ ಆರೋಪಿ ಅಪ್ಪ. ಪೊಲೀಸರಿಗೆ ಆರೋಪಿ ತಪ್ಪೊಪ್ಪಿಗೆ ನೀಡಿದ್ದಾನೆ. ಅದರಲ್ಲಿ ಮಗಳ ಆದಾಯ ಹಾಗೂ ಆಕೆಯ ಕ್ಯಾರೆಕ್ಟರ್ ಬಗ್ಗೆ ಸ್ಥಳೀಯರು ನಿಂದಿಸುತ್ತಿದ್ದರು. ಅಲ್ಲದೇ ಮಗಳ ಆದಾಯದಿಂದ ನಾನು ಜೀವ ಸಾಗಿಸುತ್ತಿದ್ದೇನೆ ಎಂದು ಗೇಲಿ ಮಾಡುತ್ತಿದ್ದರು. ಇದರಿಂದ ಅವಮಾನಕ್ಕೆ ಒಳಗಾಗಿ ಇಂಥ ಕೆಲಸ ಮಾಡಿದೆ. ನಾನು ಹಲವು ಬಾರಿ ಟೆನ್ನಿಸ್ ಅಖಾಡಮಿ ಮುಚ್ಚುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಆಕೆ ಒಪ್ಪಿರಲಿಲ್ಲ ಅಂತಲೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಪೊಲೀಸರು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅದರ ಪ್ರಕಾರ, ಚಿಕ್ಕಪ್ಪ ಕುಲ್ದೀಪ್ ಯಾದವ್, ಆಕೆಯ ಬಗ್ಗೆ ಪದೇ ಪದೆ ದೂರು ನೀಡುತ್ತಿದ್ದ. ಆದರೂ ರಾಧಿಕಾ ಯಾದವ್ ವಿವಾದಿತ ಅಕಾಡೆಮಿಯನ್ನು ಮುಂದುವರಿಸಿದ್ದಕ್ಕೆ ತಂದೆ ಬೇಸತ್ತುಗೊಂಡಿದ್ದ. ಇದೇ ಕೋಪದಲ್ಲಿ ಗುಂಡು ಹಾರಿಸಿದ್ದಾನೆ. ಅಲ್ಲದೇ ಕೌಟುಂಬಿಕ ಕಲಹ ಕೂಡ ಇತ್ತು ಎಂದು ದಾಖಲಾಗಿದೆ.