
eating-dates-during-pregnancy
Ashwaveega News 24×7 ಅ. 05: ಗರ್ಭಾವಸ್ಥೆ ಅಂದರೇನೇ ಮಹಿಳೆಯ ಖುಷಿ . ಗರ್ಭದಲ್ಲಿ ಭ್ರೂಣ ಬೆಳೆಯುವ ಸಮಯ ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹ ನೂರಾರು ಬದಲಾವಣೆಗಳು ಕಂಡುಬರುತ್ತೆ. ತುಂಬಾ ನೋವುಗಳನ್ನು ಹೆದರಿಸುತ್ತಾರೆ . ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆ ಸೊಂಟ ನೋವು ಮತ್ತು ಕೆಳಬೆನ್ನಿನ ನೋವು ಹೆಚ್ಚಾಗೋದು ಸಾಮಾನ್ಯ . ಇಂತಹ ಸಮಯದಲ್ಲಿ ಏನೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…
ಹೌದು. . .ಗರ್ಭಾವಸ್ಥೆಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮೊದಲ ಮೂರು ತಿಂಗಳು ತುಂಬಾ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನೀವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಿಂದ ಹಿಡಿದು ತಿನ್ನೋ ಆಹಾರ, ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಜಾಗರೂಕರಾಗಿರಬೇಕು.
ಈ ಸಮಯದಲ್ಲಿ, ಅನೇಕ ಮಂದಿಗೆ ಡ್ರೈ ಫ್ರೂಟ್ಸ್ ತಿನ್ನಬೇಕೋ ಇಲ್ಲವೋ ಎಂಬ ಪ್ರಶ್ನೆ ಇದೆ ಖರ್ಜೂರ ತಿನ್ನುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ ಎಂದು ಕೆಲವರು ಹೇಳಿದರೆ, ಇನ್ನೋ ಕೆಲವರು ಇದು ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳ್ತಾರೆ . ಹಾಗಾದ್ರೆ ಗರ್ಭಾವಸ್ಥೆಯಲ್ಲಿ ಖರ್ಜೂರವನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ? ಇದು ಹೇಗೆ ಸಹಾಯಕಾರಿಯಾಗುತ್ತೆ .
- ಖರ್ಜೂರವು ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ತಿನ್ನುತ್ತಾರೆ . ಏಕೆಂದರೆ ಇದು ಸಾಮಾನ್ಯ ಹೆರಿಗೆಗೆ ಸಹಾಯ ಮಾಡುತ್ತೆ ಅಂತೆ .
- ಖರ್ಜೂರವು ಶಕ್ತಿಯ ಉತ್ತಮ ಮೂಲವಾಗಿದೆ. ಅವು ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ಗಳಲ್ಲಿ ಸಮೃದ್ಧವಾಗಿದ್ದು , ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ.
- ಖರ್ಜೂರವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡುತ್ತದೆ. ಅವುಗಳಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಖರ್ಜೂರ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಖರ್ಜೂರವು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ತಾಮ್ರ ಮತ್ತು ಮ್ಯಾಂಗನೀಸ್ ನಂತಹ ಖನಿಜಗಳನ್ನು ಹೊಂದಿದ್ದು , ಇದು ಮೂಳೆಗಳ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.
- ರಕ್ತಹೀನತೆಯಿಂದ ಬಳಲುತ್ತಿರುವವರು ಖರ್ಜೂರ ತಿನ್ನುವುದು ಒಳ್ಳೆಯದು. ಖರ್ಜೂರದಲ್ಲಿ ಕಬ್ಬಿಣದ ಅಂಶವಿದ್ದು, ಇದು ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತೆ .
- ಖರ್ಜೂರವು ವಿಟಮಿನ್ ಸಿ, ಡಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತೆ . ಆದ್ದರಿಂದ, ಇದು ರೋಗನಿರೋಧಕ ವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಯಾವಾಗ ಖರ್ಜೂರ ತಿನ್ನಬೇಕು ?
ಖರ್ಜೂರವು ಗರ್ಭಕಂಠವನ್ನು ಮೃದುಗೊಳಿಸುವ ಕೆಲಸ ಮಾಡುತ್ತದೆ, ಇದು ಸಾಮಾನ್ಯ ಹೆರಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತೆ ಅಂತೆ . ಗರ್ಭಧಾರಣೆಯ ನಂತರ ಮಹಿಳೆಯರು ಖರ್ಜೂರವನ್ನು ತಿನ್ನಲು ಪ್ರಾರಂಭಿಸಲು ಕಾರಣ ಇದೆ . ಕೆಲವೊಮ್ಮೆ ಅತಿಯಾದ ಸೇವನೆಯಿಂದ ಇದು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಖರ್ಜೂರವು ಅತಿಯಾಗಿ ಸೇವಿಸುವುದರಿಂದ ಗರ್ಭಪಾತ ಮತ್ತು ಅಕಾಲಿಕ ಜನನಕ್ಕೆ ಕಾರಣವಾಗಬಹುದು.
ಆದ್ದರಿಂದ, ಐದನೇ ತಿಂಗಳಿನಿಂದ ಖರ್ಜೂರವನ್ನು ತೆಗೆದುಕೊಳ್ಳಲು ಪ್ರಾರಂಭಿಸುವುದು ಉತ್ತಮ. ನೀವು ಬೆಳಗ್ಗೆ ಇವುಗಳನ್ನು ಹಾಲಿನೊಂದಿಗೆ ಸೇವಿಸಬಹುದು. ಪ್ರತಿದಿನ ಎರಡರಿಂದ ಮೂರು ಖರ್ಜೂರ ತಿನ್ನುವುದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ … ನೀವು ಮಧುಮೇಹಿಗಳಾದ್ದರೆ, ನೀವು ಖರ್ಜೂರವನ್ನು ತಿನ್ನುವುದನ್ನು ತಪ್ಪಿಸಬಹುದು.