
ಒಂದಲ್ಲ, ಎರಡಲ್ಲ, ಮೂರನೇ ಸಲವೂ ಡೆಲ್ಲಿ ತಂಡಕ್ಕೆ ಕಪ್ ಗೆಲ್ಲುವ ಅದೃಷ್ಟ ಒಲಿಯಲಿಲ್ಲ. ಮೊದಲ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಸೋತರೆ, ಎರಡನೇ ಸೀಸನ್ನಲ್ಲಿ ಆರ್ಸಿಬಿ ವಿರುದ್ದ ನಿರಾಸೆ ಅನುಭವಿಸಿತ್ತು. ಆದರೆ ಶತಯಾ ಗತಯಾ ಮೂರನೇ ಬಾರಿಯಾದರೂ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ ಡೆಲ್ಲಿ ತಂಡಕ್ಕೆ ಮತ್ತೆ ನಿರಾಸೆ ಮುಂಬೈ ವಿರುದ್ದ 8 ರನ್ಗಳ ಸೋಲು. ಮುಂಬೈ ತಂಡ ನೀಡಿದ್ದ 150 ರನ್ಗಳ ಟಾರ್ಗೆಟ್ ಅನ್ನು ಚೇಸ್ ಮಾಡುವಾಗ ಡೆಲ್ಲಿ ತಂಡದ ಬ್ಯಾಟರ್ಗಳು ಮಂಕಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಮರಿಝನ್ನೆ ಕಪ್ ಅವರು ಮಾತ್ರ ಡೆಲ್ಲಿ ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಮರಿಝನ್ನೆ ಕಪ್ 26 ಎಸೆತಗಳಲ್ಲಿ 40 ರನ್ ಗಳಿಸಿ ಡೆಲ್ಲಿ ಪರ ಗರಿಷ್ಟ ಸ್ಕೋರರ್ ಎನ್ನಿಸಿಕೊಂಡರು. ಇದಾಗ್ಯೂ ಡೆಲ್ಲಿ ತಂಡಕ್ಕೆ ಕೊನೆ ಓವರ್ನಲ್ಲಿ 14 ರನ್ಗಳು ಬೇಕಿತ್ತು. ಈ ಹಂತದಲ್ಲಿ ಕೊನೆ ಓವರ್ನಲ್ಲಿ ಬೌಲ್ ಮಾಡಿದ ನ್ಯಾಟ್ ಸಿವರ್ ಬ್ರಂಟ್ ಕೇವಲ 5 ರನ್ ಮಾತ್ರ ನೀಡಿ ಮುಂಬೈಗೆ 8 ರನ್ಗಳ ಜಯ ತಂದುಕೊಟ್ಟರು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೂರನೇ ಬಾರಿಗೆ ಕಪ್ ಮಿಸ್ ಆಗುತ್ತಿದ್ದಂತೆ ಕೊನೆಯವರೆಗೆ ಹೋರಾಟ ಮಾಡಿದ ಮರಿಝನ್ನೆ ಕಪ್ ಅವರು ಮೈದಾನದಲ್ಲೇ ಅತ್ತರು. ಅವರ ದುಖಃ ಎಷ್ಟಿತಂದರೆ ಪ್ರಶಸ್ತಿ ನೀಡುವ ಸಂದರ್ಭದಲ್ಲೂ ಕಣ್ನೀರಿಡುತ್ತಾ ನಿರಾಸೆಯಲ್ಲಿದ್ದರು. ಅದರ ವಿಡೀಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಭಿಷೇಕ್.ಎಸ್